Home ಅಪರಾಧ ಕಾಡು ಪ್ರಾಣಿಗಳ ಚರ್ಮ, ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ

ಕಾಡು ಪ್ರಾಣಿಗಳ ಚರ್ಮ, ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಬಂಧನ

58
0

ಬೆಂಗಳೂರು:

ನಗರದ ಕತ್ತರಿಗುಪ್ಪೆಯಲ್ಲಿ ಕಾಡು ಪ್ರಾಣಿಗಳ ಉಗುರುಗಳು ಮತ್ತು ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನೆಲ್ಲೂರು ಗ್ರಾಮದ ಕಾರ್ತಿಕ್ ಕುಮಾರ್ (40) ಮತ್ತು ವಿ ಪ್ರಶಾಂತ್ (28) ಹಾಗೂ ಆಂಧ್ರದ ಚಿತ್ತೂರು ಜಿಲ್ಲೆಯ ಪ್ರಮೀಳಾ ಮತ್ತು ಆಕೆಯ ಮಗ ಸಾಯಿಕುಮಾರ್(22) ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ, ಅಧಿಕಾರಿಗಳು ಶನಿವಾರ ಸಂಜೆ 43 ಎ ಬಸ್‍ ಸಂಖ್ಯೆಯ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಧಾವಿಸಿದಾಗ ಶಾಲಾ ಬ್ಯಾಗ್‍ಗಳಲ್ಲಿ ಕಾಡು ಪ್ರಾಣಿಗಳ ಚರ್ಮ ಮತ್ತು ಉಗುರುಗಳನ್ನು ಇರಿಸಿ ಮಾರಾಟ ಮಾಡಲು ನಾಲ್ವರು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ವಿಚಾರಣೆ ವೇಳೆ ಶಂಕಿತರು ತಾವು ‘ಹಕ್ಕಿ ಪಿಕ್ಕಿ’ ಬುಡಕಟ್ಟು ಜನಾಂಗದವರು ಮತ್ತು ಮಾರಾಟಗಾರರು ಮಾತ್ರ ಎಂದು ಹೇಳಿದ್ದಾರೆ.

IMG 20201128 WA0008

ಕರ್ನಾಟಕ ಮತ್ತು ಆಂಧ್ರ ಕಾಡುಗಳಲ್ಲಿ ಪ್ರಾಣಿಗಳಿಗಾಗಿ ತಮ್ಮ ಗ್ಯಾಂಗ್ ಬೇಟೆಯಾಡುತ್ತದೆ ಎಂದು ಬಂಧಿತರು ಹೇಳಿದ್ದಾರೆ.

ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ಕೈಗೆತ್ತಿಕೊಂಡಿದ್ದು, ಅವರ ಸಹಚರರನ್ನು ಬಂಧಿಸಲು ಕಾರ್ಯನಿರತರಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನೂ ಎಚ್ಚರಿಸಿದ್ದಾರೆ.

400 ಚಿರತೆ ಉಗುರುಗಳು, ಆರು ಹುಲಿ ಉಗುರುಗಳು, ತಲೆಯೊಂದಿಗೆ ನರಿ ಚರ್ಮ, ಏಳು ಪ್ಯಾಂಗೊಲಿನ್ ಮೂಳೆಗಳು, ಎರಡು ಕರಡಿ ಉಗುರುಗಳು, ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾಗರಹೊಳೆ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ತಮ್ಮ ಸಹಚರರು ಪ್ರಾಣಿಗಳನ್ನು ಕೊಂದಿದ್ದಾರೆ ಎಂದು ಬಂಧಿತರು ಖಚಿತಪಡಿಸಿದ್ದಾರೆ. ಕಾಡು ಪ್ರಾಣಿಗಳ ಉಗುರುಗಳು ಮತ್ತು ಚರ್ಮವನ್ನು ಮಾರಾಟ ಮಾಡಲು ಅವರು ಒಂದೆರಡು ಬಾರಿ ನಗರಕ್ಕೆ ಬಂದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here