ಬೆಳಗಾವಿ:
ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ತಮಗೆ ಭರವಸೆ ನೀಡಿದ್ದಾರೆ.ಪದೇ ಪದೆ ಸಚಿವ ಸ್ಥಾನ ನೀಡುವಂತೆ ಕೇಳುವುದು ಅವರನ್ನು ಒತ್ತಾಯಿಸುವುದು ಸರಿ ಅಲ್ಲ.ಮುಖ್ಯಮಂತ್ರಿ ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ.ಸಾಂದರ್ಭಿ ಕವಾಗಿ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ನಿಂದ ಬಂದು ಉಪ ಚುನಾವಣೆ ಯಲ್ಲಿ ಗೆದ್ದಿರೋರಿಗೆ ಸಚಿವ ಸ್ಥಾನ ನೀಡುವ ಕುರಿತಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು.ಆದರೀಗ ಯಾವುದೋ ಸಮಸ್ಯೆ ಅವರಿಗೆ ಎದುರಾಗಿರಬಹುದು.ಹೀಗಾಗಿ ಅದನ್ನು ಸೂಕ್ಷ್ಮ ವಾಗಿ ತಿಳಿದುಕೊಂಡು ಯಾವುದೇ ಸಂದರ್ಭದಲ್ಲಿಯೂ ಭಾರತೀಯ ಜನತಾ ಪಕ್ಷದ ವರಿಷ್ಟರಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿ ದರು.ಮಗು ಅತ್ತರ ಮಾತ್ರ ತಾಯಿ ಹಾಲು ಕೊಡುತ್ತಾಳೆಂದು ನಾನು ನಂಬಿದವನಲ್ಲ.ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿ 2023ರವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿದರು.
ವಲಸಿಗ ಶಾಸಕರು ಬೆಂಗಳೂರಿನಲ್ಲಿ ಸಭೆ ಮಾಡಿರುವ ಕುರಿತು ಯಾವುದೇ ಮಾಹಿತಿ ತಮಗೆ ಇಲ್ಲ.ನಾನು ನನ್ನ ಕ್ಷೇತ್ರದಲ್ಲಿದ್ದೇನೆ.ಅದ್ಯಾವುದೂ ನಮ್ಮ ಗಮ ನಕ್ಕೆ ಬಂದಿಲ್ಲ.ಆ ಕುರಿಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ನಾನು ನನ್ನ ಕೆಲಸದ ಕಡೆ ಗಮನ ಕೊಟ್ಟಿದ್ದೇನೆ.ಮುಖ್ಯಮಂತ್ರಿ ಯವರು ತಮಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆ ಸ್ಥಾನ ಕೊಟ್ಟ ಬಳಿಕ ನಾನು ಬಹಳ ಸಂತೋಷವಾಗಿದ್ದೇನೆ.ಈಗಾಗಲೇ ಸ್ಲಂ ಬೋರ್ಡ್ನಲ್ಲಿ ಸುಮಾರು 97,137ಮನೆಗಳನ್ನು ಕೊಟ್ಟಿದ್ದಾರೆ.ರಾಜ್ಯದಲ್ಲಿರುವ ಸ್ಲಂ ಜನರ ಕುಟುಂಬಗಳ ಕಣ್ಣೀರು ಒರೆಸುವ ಒಳ್ಳೆಯ ಕೆಲಸಕ್ಕೆ ನನಗೆ ಅವಕಾಶ ಸಿಕ್ಕಿ ದೆ.ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಸಂತೋಷ ವಿದೆ.ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಮಂತ್ರಿಗಳು ತಕ್ಷಣವೇ ಸ್ಪಂದಿಸುತ್ತಾರೆ.ಇದರಲ್ಲಿ ಮೂಲ, ವಲಸಿಗರು ಎಂಬ ಪ್ರಶ್ನೆ ಉದ್ಬವಿಸುವುದಿಲ್ಲ ಎಂದರು.