Home ಅಪರಾಧ ಸಚಿವೆ ಶಶಿಕಲಾ ಜೊಲ್ಲೆ ನಿವಾಸದ ಎದುರು ರೌಡಿ ಶೀಟರ್ ಕೊಲೆಗೆ ಸ್ನೇಹಿತರ ಯತ್ನ

ಸಚಿವೆ ಶಶಿಕಲಾ ಜೊಲ್ಲೆ ನಿವಾಸದ ಎದುರು ರೌಡಿ ಶೀಟರ್ ಕೊಲೆಗೆ ಸ್ನೇಹಿತರ ಯತ್ನ

128
0
Rowdy sheeter Gagan Sharma
ಹೌಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಸುನೀಲ್ ಕುಮಾರ್, ಅರುಣ್, ಕೃಷ್ಣ ಕೃತ್ಯ ಎಸಗಿ ವಿಕೃತಿ ಮೆರೆದಿದ್ದಾರೆ.

ಬೆಂಗಳೂರು:

ಸಚಿವೆ ಶಶಿಕಲಾ ಜೊಲ್ಲೆ ಮನೆಯ ಮುಂದೆ ರೌಡಿ ಶೀಟರ್ ಕೊಲೆಯ ಯತ್ನ ನಡೆದಿದೆ. ಕಿಡಿಗೇಡಿಗಳು ತಮ್ಮ ಸ್ನೇಹಿನ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.

ಹೌಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಸುನೀಲ್ ಕುಮಾರ್, ಅರುಣ್, ಕೃಷ್ಣ ಕೃತ್ಯ ಎಸಗಿ ವಿಕೃತಿ ಮೆರೆದಿದ್ದಾರೆ.

ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಭಯಾನಕ ಘಟನೆ ನಡೆದಿದೆ. ಸದ್ಯ ಗಾಯಾಳು ರೌಡಿಶೀಟರ್​ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ನಿನ್ನೆ ಮಂಗಳವಾರ ಮುಂಜಾನೆ 5.30 ರಿಂದ 6 ಗಂಟೆಯ ನಡುವೆ ನಗರದಲ್ಲಿ ಈ ಘಟನೆ ನಡೆದಿದೆ.

ರೌಡಿಶೀಟರ್ ಗಗನ್ ಮತ್ತು ಉಳಿದ ಆರೋಪಿಗಳೆಲ್ಲರೂ ಸ್ನೇಹಿತರು. ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್ ಹಾಗೂ ಗಗನ್ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪವಾಗಿತ್ತು. ಹೀಗಾಗಿ ಸುನೀತ್ ಮಾತನಾಡಬೇಕು ಎಂದು ಮೊನ್ನೆ ಮಾರ್ಚ್ 20 ರಂದು ರಾತ್ರಿ 10 ಗಂಟೆಗೆ ಗಗನ್​ಗೆ ಕಾಲ್ ಮಾಡಿ ಫ್ರೇಜರ್ ಟೌನ್​ಗೆ ಕರೆಸಿಕೊಂಡಿದ್ದ. ಬಳಿಕ ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹೊಡೆದು ಮಾರ್ಚ್ 21 ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಬಂದು ಕಾರು ನಿಲ್ಲಿಸಿದ್ದ.

ಈ ವೇಳೆ ಗಲಾಟೆ ನಡೆದಿದೆ. ಸುನೀಲ್ ಸೇರಿ ಮೂವರು ಗಗನ್ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಗಾಯಾಳು ಗಗನ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಜೆಸಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿ ಸುನೀಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ನಡೆಯುತ್ತಿದೆ.

LEAVE A REPLY

Please enter your comment!
Please enter your name here