Home Uncategorized Gadag: ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಕೊಲೆ, ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮುತ್ತಪ್ಪನ ಬಂಧನ

Gadag: ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಕೊಲೆ, ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮುತ್ತಪ್ಪನ ಬಂಧನ

9
0

ಗದಗ: ಜಿಲ್ಲೆಯ ನರಗುಂದ (Nargund) ಪಟ್ಟಣದ ಹದಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ (Government School) ಅತಿಥಿ ಶಿಕ್ಷಕನ ಹೆಲ್ಲೆಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಶಿಕ್ಷಕಿ ಮಾರಣಾಂತಿಕವಾಗಿ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುತ್ತಪ್ಪನನ್ನು ನರಗುಂದ ಪೊಲೀಸರು ಹದಲಿ ರಸ್ತೆಯ ಪುಟ್ಟರಾಜ ಸರ್ಕಲ್​ನಲ್ಲಿ ಇಂದು (ಡಿ.20) ಮಧ್ಯಾಹ್ನ ಬಂಧಿಸಿದ್ದಾರೆ.

ಅತಿಥಿ ಶಿಕ್ಷಕ ಮುತ್ತಪ್ಪನಿಂದ ವಿದ್ಯಾರ್ಥಿ ಮತ್ತು ಶಿಕ್ಷಕಿ ಮೇಲೆ ಹಲ್ಲೆ

ನಿನ್ನೆ (ಡಿ.19) ಅತಿಥಿ ಶಿಕ್ಷಕ ಮುತ್ತಪ್ಪ, 4ನೇ ತರಗತಿಯಲ್ಲಿ ಓದುತ್ತಿದ್ದ ಭರತ್(10) ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದನು. ಇದರಿಂದ ಭರತ ಸಾವನ್ನಪ್ಪಿದನ್ನು. ಜೊತೆಗೆ ವಿದ್ಯಾರ್ಥಿ ತಾಯಿ, ಶಿಕ್ಷಕಿ ಗೀತಾ ಬಾರಕೇರಿ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದನು. ಇದರಿಂದ ಮಾರಣಾಂತಿಕವಾಗಿ ಗಾಯಗೊಂಡಿರುವ ಶಿಕ್ಷಕಿ ಗೀತಾ ಬಾರಕೇರಿ ಅವರನ್ನು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಮನೆಗೆಲಸದವನನ್ನು ಕೊಂದು ಲೂಟಿ ಕೇಸ್​ಗೆ ಟ್ವಿಸ್ಟ್, ಶಂಕಿತ ವ್ಯಕ್ತಿಯೇ ಶವವಾಗಿ ಪತ್ತೆ: ಚುರುಕುಗೊಂಡ ಅವಳಿ ಕೊಲೆ ಕೇಸ್​ ತನಿಖೆ

ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ

ಘಟನೆ ಬಳಿಕ ಶಾಲೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಮತ್ತು ಎಸ್ಪಿ ಶಿವಪ್ರಕಾಶ್ ಭೇಟಿ ನೀಡಿ, ಘಟನೆ ಸ್ಥಳ ಪರಿಶೀಲನೆ ಮಾಡಿದ್ದರು. ನಂತರ ಡಿಸಿಪಿಐ ಬಸವಲಿಂಗಪ್ಪ ಜಿ ಎಂ ಹಾಗೂ ಸಿಪಿಐ ಮಲ್ಲಯ್ಯ ಮಠಪತಿ ಅವ್ರಿಂದ ಮಾಹಿತಿ ಕಲೆ ಹಾಕಿದ್ದರು. ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಕೂಡಲೇ ಆರೋಪಿ ಶಿಕ್ಷಕನನ್ನು ಬಂಧಿಸಲಾಗುತ್ತೆ ಎಂದು ಎಸ್ಪಿ ಶಿವಪ್ರಕಾಶ್ ಹೇಳಿದ್ದರು.

ಇದನ್ನೂ ಓದಿ:  ಪತಿ ಅಗಲಿಕೆ ನೋವಿನಿಂದ ಮನನೊಂದು ಪತ್ನಿಯೂ ನೇಣಿಗೆ ಶರಣು

ಶಿಕ್ಷಕ ಸಂಗನಗೌಡನ ಜೊತೆ ಶಿಕ್ಷಕಿ ಗೀತಾ ಸಂಬಂಧ ಹೊಂದಿದ್ದಕ್ಕೆ ಕೊಲೆ

ಸಹ ಶಿಕ್ಷಕ ಸಂಗನಗೌಡ ಪಾಟೀಲ್, ಶಿಕ್ಷಕಿ ಗೀತಾ ಬಾರಕೇರಿ ನಡುವೆ ಸಂಬಂಧ ಇತ್ತು. ವಾಟ್ಸಪ್​​ನಲ್ಲಿ ಚಾಟಿಂಗ್ ಮಾಡುತ್ತಾಯಿದ್ದರು. ಇದರಿಂದ ಆರೋಪಿ ಮುತ್ತಪ್ಪ ಕೋಪಗೊಂಡಿದ್ದನು. ಹೀಗಾಗಿ ಶಿಕ್ಷಕಿ ಗೀತಾ ಮತ್ತು ಶಿಕ್ಷಕ ಸಂಗನಗೌಡ ಪಾಟೀಲ್ ಇಬ್ಬರನ್ನು ಕೊಲೆ ಮಾಡಲು ಪ್ಲಾನ್​ ಮಾಡಿದ್ದನು. ಆದರೆ ತಾಯಿ ಮೇಲಿನ ಸಿಟ್ಟಿಗೆ ಪುತ್ರನನ್ನು ಕೊಂದಿದ್ದಾನೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here