ಬೆಂಗಳೂರು:
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ, ಎರಡನೇ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 27 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳ ಒಟ್ಟು 374 ಕ್ಷೇತ್ರಗಳ, 770 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡೂ ತಾಲ್ಲೂಕುಗಳಿಂದ 374 ಮೂಲ ಮತದಾನ ಕೇಂದ್ರಗಳು, 35 ಹೆಚ್ಚುವರಿ (ಆಕ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 409 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 102 ಸೂಕ್ಷ್ಮ ಮತಗಟ್ಟೆಗಳು, 88 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 219 ಸಾಮಾನ್ಯ ಮತಗಟ್ಟೆಗಳಿವೆ. 122037 ಪುರುಷ ಮತದಾರರು, 121329 ಮಹಿಳಾ ಮತದಾರರು ಹಾಗೂ 5 ಇತರೆ ಮತದಾರರು ಸೇರಿದಂತೆ ಒಟ್ಟು 243371 ಮತದಾರರಿದ್ದಾರೆ.
ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ 409 ಮತಗಟ್ಟೆಗಳಿಗೆ 409 ಪಿ.ಆರ್.ಓ., 409 ಎ.ಪಿ.ಆರ್.ಓ., 818 ಪಿ.ಓ.ಗಳು, ಸೇರಿದಂತೆ 1636 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಶೇ.10 ರಷ್ಟು ಅಂದರೆ 164 ಸಿಬ್ಬಂದಿಗಳನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿದೆ. UNI