Home ಅಪರಾಧ ಗ್ರೇಟಾ ಥನ್ಬರ್ಗ್ ‘ಟೂಲ್‌ಕಿಟ್‌: ದಿಶಾ ರವಿ 5 ದಿನ ಪೊಲೀಸ್ ವಶಕ್ಕೆ

ಗ್ರೇಟಾ ಥನ್ಬರ್ಗ್ ‘ಟೂಲ್‌ಕಿಟ್‌: ದಿಶಾ ರವಿ 5 ದಿನ ಪೊಲೀಸ್ ವಶಕ್ಕೆ

73
0

ನವದೆಹಲಿ:

ರೈತರ ಪ್ರತಿಭಟನೆ ವಿಚಾರವಾಗಿ ಗ್ರೇಟಾ ಥನ್ಬರ್ಗ್ ರ ಟೂಲ್‌ಕಿಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧಿತರಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ​ ಥನ್ಬರ್ಗ್​ ರ ಟೂಲ್​ ಕಿಟ್​ ಪ್ರಕರಣಕ್ಕೆ ಸಂಬಂಧಿಸಿ ದಿಶಾ ರವಿ ಅವರನ್ನು ಪೊಲೀಸರು ಬಂಧಿಸಿ ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ಕೋರ್ಟ್​ ದಿಶಾ ಅವರನ್ನು ಐದು ದಿನ ಪೊಲೀಸ್​ ಕಸ್ಟಡಿಗೆ ನೀಡಿದೆ.

ದಿಶಾ ರವಿ, ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್​ ಕಾರ್ಮಲ್​ ವಿದ್ಯಾರ್ಥಿನಿಯಾಗಿದ್ದರು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಘಟನೆ ಈ ಟೂಲ್​ಕಿಟ್ ಸೃಷ್ಟಿಸಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನು ಪ್ರಸಾರ ಮಾಡಿರುವ ಆರೋಪ ದಿಶಾ ಮೇಲಿದೆ.

ಇದನ್ನೂ ಓದಿ: ಗ್ರೇಟಾ ಥನ್‌ಬರ್ಗ್‌ರ “ಟೂಲ್‌ಕಿಟ್” ಹಂಚಿಕೊಂಡಿದ್ದಕ್ಕಾಗಿ 21 ವರ್ಷದ ಕಾರ್ಯಕರ್ತನನ್ನು ಬೆಂಗಳೂರಿನಲ್ಲಿ ಬಂಧನ https://kannada.thebengalurulive.com/21-year-old-activist-arrested-in-bengaluru-for-sharing-greta-thunbergs-toolkit/

LEAVE A REPLY

Please enter your comment!
Please enter your name here