Home ಬೆಂಗಳೂರು ನಗರ ಹಿಜಾಬ್ ವಿಷಯ ನ್ಯಾಯಾಂಗದ ಅಂಗಳದಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಅನಗತ್ಯ ಚರ್ಚೆ ಬೇಡ :ವಿಶ್ವೇಶ್ವರ ಹೆಗಡೆ...

ಹಿಜಾಬ್ ವಿಷಯ ನ್ಯಾಯಾಂಗದ ಅಂಗಳದಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಅನಗತ್ಯ ಚರ್ಚೆ ಬೇಡ :ವಿಶ್ವೇಶ್ವರ ಹೆಗಡೆ ಕಾಗೇರಿ

18
0
Hijab Row: no need for unnecessary discussion as matter is before Court says Karantaka speaker Vishweshwar Hegde Kageri
bengaluru

ಬೆಂಗಳೂರು:

ಹಿಜಾಬ್ ಕುರಿತ ವಿಷಯವು ನ್ಯಾಯಾಂಗದ ಅಂಗಳದಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಈ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.  

ವಿಧಾನ ಮಂಡಲದ ಸಮಿತಿ ಕೊಠಡಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಧರ್ಮದಂತಹ ಸೂಕ್ಷ್ಮ ವಿಚಾರಗಳ ಕುರಿತು ವಾದ-ವಿವಾದಗಳು ನಡೆದಾಗ ಸಂದರ್ಭದ ದುರುಪಯೋಗ ಮಾಡಿಕೊಳ್ಳುವವರು ಹಾಗೂ ದುರ್ಲಾಭ ಪಡೆಯುವವರು ಇರುತ್ತಾರೆ ಎಂಬ ಬಗ್ಗೆ ಎಚ್ಚರ ಮತ್ತು ಜಾಗೃತಿ ನಮ್ಮಲ್ಲಿ ಇರಬೇಕು. ನ್ಯಾಯಾಂಗದ ವ್ಯವಸ್ಥೆಯಲ್ಲಿ ಗೌರವವಿಟ್ಟು ನ್ಯಾಯಾಲಯದ ತೀರ್ಪ ಹೊರ ಹೊಮ್ಮುವವರೆಗೂ ತಾಳ್ಮೆ ಮತ್ತು ಸಂಯಮ ಕಾಯ್ದುಕೊಳ್ಳುವುದು ರಾಜ್ಯದ ಹಾಗೂ ರಾಷ್ಟ್ರದ ದೃಷ್ಠಿಯಿಂದ ಒಳಿತು ಎಂದು ಅವರು ಹಿತ ನುಡಿದರು.  

bengaluru

LEAVE A REPLY

Please enter your comment!
Please enter your name here