Home ಬೆಂಗಳೂರು ನಗರ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ್ದ ಇಬ್ಬರ ಬಂಧನ

ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ್ದ ಇಬ್ಬರ ಬಂಧನ

70
0
Hindu man thrashed for giving lift on 2-wheeler to Muslim woman who was in burkha
bengaluru

ಬೆಂಗಳೂರು:

ನಗರದ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿಗೆ ಬೈಕ್​ನಲ್ಲಿ ಡ್ರಾಪ್​ ಕೊಡುವಾಗ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.

ಬಂಧಿತರು 26 ವರ್ಷ ಹಾಗೂ 24 ವರ್ಷದ ಆರೋಪಿಗಳು.

ಮುಸ್ಲಿಂ ಯುವತಿಗೆ ವ್ಯಕ್ತಿಯೋರ್ವ ಬೈಕ್​ನಲ್ಲಿ ಡ್ರಾಪ್ ನೀಡುತ್ತಿದ್ದಾಗಈ ವೇಳೆ ಕೆಲ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದರು.

bengaluru

ಮುಸ್ಲಿಂ ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಲ್ಲದೇ ಘಟನೆಯ ಕುರಿತು ವಿಡಿಯೋ ಮಾಡಿದ್ದರು. ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಘಟನೆಗೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆ ನಡೆದ 12 ಗಂಟೆಯೊಳಗಾಗಿ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕರಿಬಸವನಗೌಡ ಮಾರ್ಗದರ್ಶನದಲ್ಲಿ ಸುದ್ದಿಗುಂಟೆಪಾಳ್ಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಡಿ.ಎಸ್ ನಟರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದಿತ್ತು. ನಮ್ಮ ಸಮುದಾಯದ ಮಹಿಳೆ ಬೇರೆಯವರ ಜೊತೆ ಹೋಗುತ್ತಾ ಇರೋದಕ್ಕೆ ಹಾಗೆ ಮಾಡಿದೆ. ಮುಂದೆ ಈ ತರಹದ ಯಾವುದೇ ತಪ್ಪು ಮಾಡುವುದಿಲ್ಲ’ಎಂದು ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುದ್ದುಗುಂಟೆಪಾಳ್ಯ ಪೊಲೀಸರು ರಹಸ್ಯ ಸ್ಥಳದಲ್ಲಿ ಆರೋಪಿಗಳ ವಿಚಾರಣೆ ಮಾಡುತ್ತಿದ್ದಾರೆ. ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹಾಗೂ ಎಸಿಪಿ ಕರಿಬಸವನಗೌಡ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ‘ವಿಡಿಯೋ ಮಾಡಿದ್ದು ತಪ್ಪಾಯಿತು ಸರ್ ಎಂದು ಕಣ್ಣೀರು ಹಾಕಿದ್ದಾರೆ.

Also Read: Bengaluru’s Taliban ‘cops’: Muslim youths bash up Hindu man in company of Muslim woman

bengaluru

LEAVE A REPLY

Please enter your comment!
Please enter your name here