Illegal tree felling case: MP Pratap Simha’s brother Vikram Simha granted bail | ಅಕ್ರಮವಾಗಿ ಮರ ಕಡಿತಲೆ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು
ಬೆಂಗಳೂರು:
ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್ಸಿಂಹ ಅವರ ಸಹೋದರ ವಿಕ್ರಂ ಸಿಂಹರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವುದು ವರದಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ನೂರಾರು ಮರ ಕಡಿದು ಸಾಗಿಸಿದ ಆರೋಪದಡಿ ವಿಕ್ರಮ್ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೇಲೂರು ತಾಲೂಕಿನ ನಂದಗೋಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್ಎಫ್ಒ, ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಿದಿರುವ ಮರಗಳನ್ನು ಅರಣ್ಯ ಇಲಾಖೆ ಡಿಪೊದಲ್ಲಿ ಸಂಗ್ರಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಹಾಗೂ ಸಹೋದರನ ವಿರುದ್ಧ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿತ್ತು. ಅಣ್ಣ ಪ್ರತಾಪ್ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು.
