Home ಅಪರಾಧ ಐಎಂಎ ಬಹುಕೋಟಿ ವಂಚನೆ, ಮಾಜಿ ಸಚಿವ ರೋಷನ್ ಬೇಗ್ ಬಂಧನ

ಐಎಂಎ ಬಹುಕೋಟಿ ವಂಚನೆ, ಮಾಜಿ ಸಚಿವ ರೋಷನ್ ಬೇಗ್ ಬಂಧನ

51
0

ಬೆಂಗಳೂರು:

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನನ್ನು ಸತತ 10 ಗಂಟೆಗಳ ವಿಚಾರಣೆ ಬಳಿಕ ಸಿಬಿಐ ಬಂಧಿಸಿದೆ ಎಂದು ವರದಿಯಾಗಿದೆ .

ಸತತ 400 ಕೋಟಿ ವಂಚನೆ ಮಾಡಲಾಗಿದೆ ಎಂದು ಐಎಂಎ ಮಾಲೀಕರು ಆರೋಪ ಮಾಡಿದ್ದರು. ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಬಿಐ, ತನ್ನ ತನಿಖೆಯನ್ನು ಇಂದು ಚುರುಕುಗೊಳಿಸಿತ್ತು.

ಇಂದು ಬೆಳಿಗ್ಗೆಯಿಂದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯ ಹಿನ್ನಲೆಯಲ್ಲಿ ವಿಚಾರಣೆ ನಡೆಸುತ್ತಿತ್ತು, ನಂತರ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಬಂಧಿಸಿ ಕೋರ್ಟ್ ಆದೇಶ ಮೇರೆಗೆ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಸಿಬಿಐ ಅವರನ್ನು 2019 ರ ಜುಲೈನಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿತ್ತು. ಇಂದು ಬೇಗ್ರನ್ನು ಸಿಬಿಐ ಸತತ 10 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ ನಂತರ ಅವರನ್ನು ಕೋರ್ಟ್ ಆದೇಶ ಮೇರೆಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು , ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ತಳಕು ಹಾಕಿಕೊಂಡಿತ್ತು.

ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಬಂಧನಕ್ಕೂ ಮೊದಲೇ ವಿಡಿಯೋ ಮೂಲಕ ರೋಷನ್ ಬೇಗ್ ಹಣ ಪಡೆದಿದ್ದಾರೆಂದು ಮಾಲೀಕರು ಆರೋಪಿಸಿದ್ದರು. ಈ ಕುರಿತು ಎಸ್ಐಟಿ ಸಹ ರೋಷನ್ ಬೇಗ್ ವಿಚಾರಣೆ ನಡೆಸಿತ್ತು.

ಬಳಿಕ ಇದೇ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬೆನ್ನಲ್ಲೆ ರೋಷನ್ ಬೇಗ್ ವಿಚಾರಣೆ ಮುಂದುವರಿಸಲಾಗಿತ್ತು ಮನ್ಸೂರ್ ಮಾಡಿದ ಆರೋಪಗಳಿಗೆ ಪುಷ್ಠಿ ನೀಡುವಂತ ಕೆಲವು ಸಾಕ್ಷಿ- ಆಧಾರಗಳು ದೊರತ ನಂತರ ಸಿಬಿಐ ಇಂದು ಬೆಳಗ್ಗೆ 11.30ಕ್ಕೆ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ.

LEAVE A REPLY

Please enter your comment!
Please enter your name here