ಬೆಂಗಳೂರು:
ಮೈಸೂರು ರಸ್ತೆ , ಕೆಂಗೇರಿ . ಆರ್,ಆರ್ ನಗರ, ನಾಗರಬಾವಿ ಮತ್ತು ಕೆಂಗೇರಿ ಉಪನಗರಗಳಲ್ಲಿ ವಾಸ ಮಾಡುತ್ತಿರುವ 70 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಬಹುದಿನಗಳ ಕನಸು ನನಸಾಗುತ್ತಿದೆ.
ವರಮಹಾಲಕ್ಷ್ಮಿ ಮತ್ತು ಗೌರಿ ಗಣೇಶನ ಹಬ್ಬದ ಕೊಡುಗೆಯಾಗಿ, ಮೈಸೂರು ರಸ್ತೆ -ಕೆಂಗೇರಿ ವಿಸ್ತರಿತ ಮೆಟ್ರೋ ಮಾರ್ಗ ಇದೇ 29 ರಂದು ಸಂಚಾರಕ್ಕೆ ಮುಕ್ತವಾಗಲಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಎರಡು ಬಾರಿ ಮಾರ್ಗದ ಪರಿಶೀಲನೆ ಮಾಡಿ, ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದು , ಕಡೆಗೂ ಉದ್ಘಾಟನೆಗೆ ಶುಭ ಮಹೂರ್ತ ನಿಗದಿಯಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಜಂಟಿಯಾಗಿ ನೂತನ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.