Home ಕರ್ನಾಟಕ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅವ್ಯವಹಾರ

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅವ್ಯವಹಾರ

48
0

ತನಿಖೆಗೆ ಜಂಟಿ ಸದನ ಸಮಿತಿ; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು:

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನಡೆದಿರುವ ಹಗರಣದ ಬಗ್ಗೆ ಜಂಟಿ ಸದನ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ವೆಂಕಟರೆಡ್ಡಿ ಮುದ್ನಾಳ್ ಕೇಳಿದ ಪ್ರಶ್ನೆಗೆ ಮಧ್ಯಪ್ರವೇಶಿಸಿ ಮಾತನಾಡಿದ ಯಡಿಯೂರಪ್ಪ, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಾಕಷ್ಟು ಹಗರಣ ನಡೆದಿದೆ. ಸ್ವತಃ ತಾವೇ ಭೇಟಿ ನೀಡಿದಾಗ, ಸಾಮಗ್ರಿ ಬಿದ್ದಿರುವುದು, ಸಾಕಷ್ಟು ಲೂಟಿ ಮಾಡಿರುವುದು ಕಂಡುಬಂದಿದೆ. ಇದರಲ್ಲಿ ಭಾರೀ ದೊಡ್ಡ ದೊಡ್ಡ ಹಗರಣ ನಡೆದಿದೆ. ಆದ್ದರಿಂದ ಸೂಕ್ತ ಸನಿಖೆ ಮಾಡಿಸಿ, ಯಾರು ಲೂಟಿ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು. ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು, ಎರಡು ತಿಂಗಳ ಒಳಗೆ ವರದಿ ಸಲ್ಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Screenshot 915
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ಇದಕ್ಕೂ ಮೊದಲು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಬರಿ ಲೂಟಿ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 90ಷ್ಟು ಘಟಕಗಳು ಬಂದ್ ಆಗಿವೆ. ಅಧಿಕಾರಕ್ಕೆ ಬಂದಾಗ ಸರಿ ಮಾಡುತ್ತೇನೆ ಎಂದು ಹೇಳಿದ್ದ ಈಶ್ವರಪ್ಪ ಅವರು ಯಾಕೊ ಮೌನವಾಗಿದ್ದಾರೆ ಎಂದು ಕುಟುಕಿದರು.

ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿ, ತಾವು ಮೌನವಾಗಿ ಇಲ್ಲ. ನಾವು ಅಧಿಕಾರಕ್ಕೆ ಬಂದ ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇಪ್ಸಾ ಎಂಬ ಸಂಸ್ಥೆಗೆ ಸರ್ವೆ ಮಾಡಲು ಸೂಚಿಸಿದ್ದೆವು, ಈ ಸಂಸ್ಥೆಯು ಅಧ್ಯಯನ ನಡೆಸಿ ವರದಿ ನೀಡಿದೆ, ಅದರಂತೆ ಶೇಕಡಾ 70 ರಷ್ಟು ಕಾರ್ಯ ನಿರ್ವಹಿಸುತ್ತಿವೆ, ಶೇಕಡಾ 4ರಷ್ಟು ಮುಚ್ಚಿವೆ, ಶೇಕಡಾ 26ರಷ್ಟು ತಾತ್ಕಾಲಿಕವಾಗಿ ಸ್ಥಗಿತವಾಗಿದೆ. 18,500 ಘಟಕಗಳಲ್ಲಿ 1,629 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತವಾಗಿವೆ. ಏನೇನು ಪ್ರಯತ್ನ ನಡೆಸಬೇಕು ಅವುಗಳನ್ನೆಲ್ಲಾ ಸರ್ಕಾರ ಮಾಡುತ್ತಿವೆ.

ಟೆಂಡರ್ ರದ್ದತಿ ಪ್ರಕ್ರಿಯೆಯೂ ನಡೆಯುತ್ತಿವೆ ಎಂದು ಹೇಳಿದರು.

ಸದಸ್ಯರಾದ ಯು.ಟಿ.ಖಾದರ್ ಸೇರಿದಂತೆ ಹಲವು ಶಾಸಕರು ಮಾತನಾಡಿದರು.

LEAVE A REPLY

Please enter your comment!
Please enter your name here