Home ಬೆಂಗಳೂರು ನಗರ ಬೆಂಗಳೂರು ರಸ್ತೆಗಳ ಅವೈಜ್ಞಾನಿಕ ಕಾಮಗಾರಿ; ಲೋಕಾಯುಕ್ತರಿಗೆ ಜನತಾ ಪಾರ್ಟಿ ದೂರು

ಬೆಂಗಳೂರು ರಸ್ತೆಗಳ ಅವೈಜ್ಞಾನಿಕ ಕಾಮಗಾರಿ; ಲೋಕಾಯುಕ್ತರಿಗೆ ಜನತಾ ಪಾರ್ಟಿ ದೂರು

31
0
Janata Party files complaint against Unscientific roads in Bengaluru
bengaluru

ಬೆಂಗಳೂರು:

ನಗರಾಭಿವೃದ್ಧಿ ಇಲಾಖೆ ,ಬಿಬಿಎಂಪಿ ಆಯುಕ್ತರು ,ಬಿಡಿಎ ಆಯುಕ್ತರು ಹಾಗೂ ಜಲ ಮಂಡಲ ಅಧ್ಯಕ್ಷರ ವಿರುದ್ಧ ಜನತಾ ಪಾರ್ಟಿ ವತಿಯಿಂದ ಲೋಕಾಯುಕ್ತರಿಗೆ ಇಂದು ದೂರು ಸಲ್ಲಿಸಲಾಯಿತು.

ಬೆಂಗಳೂರು ನಗರದಲ್ಲಿ ಅವೈಜ್ಞಾನಿಕ ರಸ್ತೆಗಳಿಂದ ಕೂಡಿದ್ದು , ರಸ್ತೆಯಲ್ಲಿ ‌ವಾಹನ ಸವಾರರು ಓಡಾಡಲು ಭಯ ಬಿತ್ತರಾಗಿದ್ದಾರೆ ಎಲ್ಲಿ ನೋಡಿದರು ಗುಂಡಿಗಳ ರಸ್ತೆ ಇರುವಾಗ ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಭಯ ಪಡುವುದು ಸಹಜವಾಗಿದೆ.

ನಮ್ಮ ಅಧಿಕಾರಿಗಳು ರಸ್ತೆಗಳನ್ನು ಡಾಂಬರಿಕಾರಣ ಮಾಡುವಾಗ ಒಳ್ಳೆಯ ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡುವ ಬದಲು ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ಮಾಣದಿಂದ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ ,ಇದರ ಪರಿಣಾಮ ಸಾರ್ವಜನಿಕ ಸಾವುಗಳು ಈ ವರ್ಷದಲ್ಲಿ ಎರಡು ಅಮೂಲ್ಯ ಜೀವಗಳನ್ನು ಬಲಿ ಪಡೆದಿರುವ ರಸ್ತೆಗಳು ಹಾಗೂ ಅವೈಜ್ಞಾನಿಕ ರಸ್ತೆಗಳನ್ನು ನಿರ್ಮಾಣ ಮಾಡಿರುವ ಅಧಿಕಾರಗಳ ವಿರುದ್ಧ ಜನತಾ ಪಾರ್ಟಿ ವತಿಯಿಂದ ಮಾನ್ಯ ಲೋಕಯುಕ್ತರಿಗೆ ಮೇಲೆ ತಿಳಿಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ದೂರು ದಾಖಲು ಮಾಡಲಾಗಿದೆ ಜನತಾ ಪಕ್ಷದ ನಗರ ಅಧ್ಯಕ್ಷ ಎನ್.ನಾಗೇಶ್ ತಿಳಿಸಿದ್ದಾರೆ.

bengaluru

ರಾಜ್ಯ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಹುಸೇನ್ ಸಾಬ್ ಕೆರೂರು, ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ಶಿವಕುಮಾರ್ , ಸದಸ್ಯತ್ವ ಸಮಿತಿ ಸದಸ್ಯರಾದ ಅಭಿಷೇಕ್, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಹರ್ಷ ಗೌಡ ಹಾಜರಿದ್ದರು.

bengaluru

LEAVE A REPLY

Please enter your comment!
Please enter your name here