Home ಕರ್ನಾಟಕ ಮೋಟಾರು ವಾಹನ ತೆರಿಗೆ ಪಾವತಿಗೆ ಮತ್ತೆ ಅವಧಿ ವಿಸ್ತರಣೆ: ಡಿಸಿಎಂ ಸವದಿ

ಮೋಟಾರು ವಾಹನ ತೆರಿಗೆ ಪಾವತಿಗೆ ಮತ್ತೆ ಅವಧಿ ವಿಸ್ತರಣೆ: ಡಿಸಿಎಂ ಸವದಿ

31
0

ಬೆಂಗಳೂರು:

ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಭಾವಿಸಿ ಕರ್ನಾಟಕ ಮೋಟಾರು ವಾಹನ ಕಾಯ್ದೆ 1957 ರ ಕಲಂ 4(1)ರ ನಿಯಮಗಳನ್ನು ಸಡಿಲಗೊಳಿಸಿ ಈ ಕೆಳಕಂಡಂತೆ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ದಿನಾಂಕ ಜುಲೈ 15, 2021 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

.ಕರ್ನಾಟಕದ ಎಲ್ಲಾ ನೊಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ದಿನಾಂಕ 15/ 4/ 2021 ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು, ದಿನಾಂಕ 15/ 5 /2021, ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಿನಾಂಕ 31/ 5 /2021ಮತ್ತು 30/ 6 /2021 ರವರಿಗೆ ದಂಡ ರಹಿತವಾಗಿ ಪಾವತಿಸಲು ವಿಸ್ತರಿಸಿದ್ದ ಅವಧಿಯನ್ನು ದಿನಾಂಕ 15/ 7/ 2021 ರವರೆಗೆ ವಿಸ್ತರಿಸಲಾಗಿದೆ.

ಕರ್ನಾಟಕದ ಎಲ್ಲಾ ನೊಂದಾಯಿತ ಸರಕು ಸಾಗಾಣಿಕೆ ವಾಹನಗಳಿಗೆ ( ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಸಂಬಂಧಿಸಿದಂತೆ ದಿನಾಂಕ 15 /5/ 2021 ಮತ್ತು 15/ 6 /2021 ರ ಒಳಗಾಗಿ ಪಾವತಿಸಬೇಕಾಗಿದ್ದ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ 30/ 6/ 2021ರ ವರೆಗೆ ವಿಸ್ತರಿಸಿದ ಅವಧಿಯನ್ನು ದಿನಾಂಕ 15/ 7/ 2021 ರವರೆಗೆ ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ವಿಸ್ತರಿಸಲಾಗಿದೆ.

LEAVE A REPLY

Please enter your comment!
Please enter your name here