Home ಬೆಂಗಳೂರು ನಗರ ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ ತಂಗಡಗಿ ಸಂತಾಪ

ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ ತಂಗಡಗಿ ಸಂತಾಪ

17
0
Journalist Sharanappa Kumbar passes away: Minister Shivaraj Tangadagi condoles
Journalist Sharanappa Kumbar passes away: Minister Shivaraj Tangadagi condoles

ಬೆಂಗಳೂರು:

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳದ ಹಿರಿಯ ಪತ್ರಕರ್ತ, ಕೃಷಿ ಪ್ರಿಯ ವೆಬ್ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಅವರ ಅಕಾಲಿಕ ಸಾವಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚವ ಶಿವರಾಜ್ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ.

ಶರಣಪ್ಪ ಕುಂಬಾರ ಅವರು ಪ್ರತಿಭಾವಂತ ಪತ್ರಕರ್ತರಾಗಿ ನಾಡಿನ ವಿವಿಧ ದಿನಪತ್ರಿಕೆ, ಮಾಧ್ಯಮಗಳಲ್ಲಿ ಸೇವೆಗೈದಿದ್ದಾರೆ. ಅಕಾಲಿಕವಾಗಿ ನಿಧನ ಆಘಾತ ತಂದಿದೆ. ಯುವಕ ಶರಣಪ್ಪ ಕುಂಬಾರ ಅವರು ಅಕಾಲಿಕವಾಗಿ ನಮ್ಮನ್ನಗಲಿರುವುದು, ಮಾಧ್ಯಮ ಲೋಕಕ್ಕೆ ನಷ್ಟವಾಗಿದೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ತಂಗಡಗಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here