ಬೆಂಗಳೂರಿನಲ್ಲಿ ಜೆ ಪಿ ನಡ್ಡಾ ರೋಡ್ ಶೋ
ಬೆಂಗಳೂರು:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೋಮವಾರ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @DVSadanandGowda, ಸಚಿವರಾದ ಶ್ರೀ @STSomashekarMLA ಮತ್ತು ಪ್ರಮುಖರು ಉಪಸ್ಥಿತರಿದ್ದರು. #PoornaBahumata4BJP #BJPYeBharavase #BJPWinningKarnataka
— BJP Karnataka (@BJP4Karnataka) May 1, 2023
2/2 pic.twitter.com/gpgR877SKI
ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಸ್ಯಾಟ ಲೈಟ್ ಟೌನ್ ನಲ್ಲಿ ಜೆಪಿ ನಡ್ಡಾ ನಡೆಸಿದ ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ರೋಡ್ ಶೋ ಮಾರ್ಗದುದ್ದಕ್ಕೂ ಬಿಜೆಪಿ ಧ್ವಜ ಹಿಡಿದು ಸಾಗಿದ ಬಿಜೆಪಿ ಕಾರ್ಯಕರ್ತರು ಜೆ. ಪಿ. ನಡ್ಡಾ ಅವರ ಮೇಲೆ ಹೂ ಮಳೆ ಸುರಿದು, ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.
