ಬೆಂಗಳೂರು:
ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಸತ್ಯಜಿತ್ (72) ಅವರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ನಿಧನಹೊಂದಿದ್ದಾರೆ.
ಕನ್ನಡದ ಸುಮಾರು 300ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಸತ್ಯಜಿತ್ ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.
Also Read: Kannada actor Sathyajith dies
ಕಳೆದ ಮೂರು – ನಾಲ್ಕು ದಶಕಗಳಿಂದಲೂ ಸಿನಿಮಾ ರಂಗದಲ್ಲಿರುವ ಸತ್ಯಜಿತ್ ಹಿಂದಿ ಹಾಗೂ ತೆಲುಗಿನ ಕೆಲ ಚಿತ್ರಗಳಲ್ಲೂ ನಟಿಸಿದ್ದರು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಸಿನಿಮಾ ನಂತರ ಸತ್ಯಜಿತ್ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.