Home ರಾಜಕೀಯ ಬುಧವಾರ ಬಿಜೆಪಿ ಶಾಸಕರೊಂದಿಗೆ ಸಿಎಂ ಔತಣಕೂಟ

ಬುಧವಾರ ಬಿಜೆಪಿ ಶಾಸಕರೊಂದಿಗೆ ಸಿಎಂ ಔತಣಕೂಟ

78
0

ಬೆಂಗಳೂರು:

ಸುಗಮ ಆಡಳಿತಕ್ಕಾಗಿ ರಾಜ್ಯ ಬಿಜೆಪಿ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬುಧವಾರ ವಿಧಾನಸಭೆ ಅಧಿವೇಶನ ಮುಗಿದ ನಂತರ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ ಮೂಲಗಳ ಪ್ರಕಾರ, ಔತಣಕೂಟವು ಬುಧವಾರ ಸಂಜೆ 7 ಗಂಟೆಗೆ ಅವರ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್‌ನಲ್ಲಿ ನಡೆಯಲಿದೆ.

ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಸವಾರಾಜ ಬೊಮ್ಮಾಯಿ ಅವರು ಸೆ 16ರಂದು ಅಂದರೆ ಅಧಿವೇಶನ ಆರಂಭವಾಗುವ ಮುನ್ನವೇ ಶಾಸಕರೊಂದಿಗೆ ಈ ಭೋಜನ ಕೂಟವನ್ನು ಏರ್ಪಡಿಸಲು ನಿರ್ಧರಿಸಿದ್ದರು. ಆದರೆ, ಹುಬ್ಬಳ್ಳಿಯಲ್ಲಿ ಅವರ ಆಪ್ತ ಸ್ನೇಹಿತ ರಾಜು ಪಾಟೀಲ್ ಸಾವಿನಿಂದಾಗಿ ಅದನ್ನು ರದ್ದುಗೊಳಿಸಲಾಗಿತ್ತು.

Read here: Karnataka CM to woo his flock with a dinner meeting!

LEAVE A REPLY

Please enter your comment!
Please enter your name here