Home ತುಮಕೂರು ಮುಖ್ಯಮಂತ್ರಿಗಳಿಂದ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಉದ್ಘಾಟನೆ

ಮುಖ್ಯಮಂತ್ರಿಗಳಿಂದ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಉದ್ಘಾಟನೆ

166
0
Karnataka Chief Minister inaugurates 161-feet Panchmukhi Anjaneya Swamy statue at Kunigal
bengaluru

ಕನ್ನಡನಾಡಿಗೆ ಒಳ್ಳೆಯ ಕಾಲವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು:

161 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಯಾಗಿರುವುದು ಮುಂದಿನ ದಿನಗಳಲ್ಲಿ ಕನ್ನಡನಾಡಿಗೆ ಒಳ್ಳೆಯ ಕಾಲವಿದೆ ಎನ್ನುವುದರ ಸೂಚನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Also Read: Karnataka Chief Minister says good times ahead as he unveils 161-ft Hanuman statue

ಅವರು ಇಂದು ಕುಣಿಗಲ್ ತಾಲ್ಲೂಕಿನ ಬಿದನಗೆರೆ ಶ್ರೀ ಬಸವೇಶ್ವರ ಮಠದ ವತಿಯಿಂದ ನಿರ್ಮಿಸಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಉದ್ಘಾಟಿಸಿ ಮಾತನಾಡಿದರು.

bengaluru
Karnataka Chief Minister inaugurates 161-feet Panchmukhi Anjaneya Swamy statue at Kunigal

ಶ್ರೀ ರಾಮನವಮಿಯ ದಿನದಂದು ಪವಿತ್ರ ಕೆಲಸ ಕಾರ್ಯಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಲ್ಲಿಯ ಅಭಿವೃದ್ಧಿ ಕಾರ್ಯಗಳು ಕೆಲವೇ ವರ್ಷಗಳಲ್ಲಿ ಎಷ್ಟು ದೊಡ್ಡ ಶಕ್ತಿಯಾಗಿ ಕ್ಷೇತ್ರಕ್ಕೆ ಬೆಳೆದಿದೆ ಎಂದು ತಿಳಿಯುತ್ತದೆ. ಇಲ್ಲಿನ ಭಕ್ತರ ಮನಸ್ಸು ಬಹಳ ದೊಡ್ಡದಿದೆ ಎಂದು ತಿಳಿಯುತ್ತದೆ ಎಂದರು.

ಪಂಚಮುಖಿ ಆಂಜನೇಯ ಬಹಳ ವಿಶಿಷ್ಟ. ರಾಮಾಯಣದಲ್ಲಿ ವಿಶೇಷವಾದ ಸಂದರ್ಭದಲ್ಲಿ ಹನುಮನ ಅವತಾರವಿದು . ಸಂಪೂರ್ಣವಾಗಿ ಲೋಕಕಲ್ಯಾಣ ಕ್ಕಾಗಿ ಹನುಮ ಈ ಅವತಾರವನ್ನು ಎತ್ತಿದ ಎನ್ನುವುದು ತಿಳಿದ ಸಂಗತಿ. ಕನ್ನಡನಾಡಿನಲ್ಲಿ 161 ಅಡಿ ಎತ್ತರದ ಮೂರ್ತಿ ಸ್ಥಾಪನೆಯಾಗಿರುವುದು ಹನುಮನ ಇಚ್ಛೆ. ಶಿಲ್ಪಿಗಳು ಅದ್ಭುತವಾದ ಕಲಾಕೃತಿ ನಿರ್ಮಿಸಿದ್ದಾರೆ. ಸ್ವಾಮೀಜಿಗಳು ಅದಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಂಜಾವಧೂತ ಸ್ವಾಮೀಜಿ, ಹರಿಹರ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಬಸವೇಶ್ವರ ಮಠದ ಧರ್ಮಾಧಿಕಾರಿ ಡಾ.ಧನಂಜಯ್ಯ ಗುರೂಜಿ , ಸಚಿವ ಅಶ್ವತ್ಥ್ ನಾರಾಯಣ್, ಶಾಸಕರಾದ ಡಾ: ರಂಗನಾಥ್, ರಾಜೂಗೌಡ, ಮಾಜಿ ಶಾಸಕ ಸುರೇಶ್ ಗೌಡ, ಕೃಷ್ಣ ಕುಮಾರ್, ಸಂಸದ ಮುನಿಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here