Home ಬೆಂಗಳೂರು ನಗರ ರಾಮನವಮಿ ವಿಷೇಶ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

ರಾಮನವಮಿ ವಿಷೇಶ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು

24
0
Karnataka Governor Gehlot pays obeisance to Lord Venkateshwara at Tirumala
bengaluru

ತಿರುಪತಿ/ಬೆಂಗಳೂರು:

ಶ್ರೀ ರಾಮನವಮಿ ವಿಶೇಷ ದಿನದಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Also Read: Karnataka Governor Gehlot pays obeisance to Lord Venkateshwara at Tirumala

ಕರ್ನಾಟಕದ ರಾಜ್ಯಪಾಲರಾದ ನಂತರ ಎರಡನೇ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು, ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ ಹೆಸರು ಪಸರಿಸಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

bengaluru
Karnataka Governor Gehlot pays obeisance to Lord Venkateshwara at Tirumala

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು. ನಂತರ ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ಗೌರವಾನ್ವಿತ ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ತಿರುಪತಿ ವಿಶೇಷ ಅಧಿಕಾರಿ ಲೋಕನಾಥನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here