Home ಬೆಂಗಳೂರು ನಗರ ಕೆ ಎಸ ಆರ್ ಪಿ ಕ್ಯಾಂಟೀನಲ್ಲಿ ನಡೆದ ಹಣ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್...

ಕೆ ಎಸ ಆರ್ ಪಿ ಕ್ಯಾಂಟೀನಲ್ಲಿ ನಡೆದ ಹಣ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಗೃಹ ಸಚಿವ ಆರಗ ಜ್ಞಾನೇಂದ್ರ

23
0
Karnataka: Criminal case against officials involved in KSRP canteen scam
bengaluru

ಬೆಂಗಳೂರು:

ಕೆ ಎಸ ಆರ್ ಪಿ ಒಂದನೇ ಪಡೆ, ಬೆಂಗಳೂರು ಘಟಕದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಹಾಗೂ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ, ಕ್ರಿಮಿನಲ್ ಮೊಕದ್ದಮ್ಮೆಯನ್ನು ದಾಖಲಿಸಲಾಗಿಸಲಾಗುವುದು ಹಾಗೂ ಸೇವೆಯಿಂದ ಅಮನಾತು ಗೊಳಿಸಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಸಚಿವರು, ಪ್ರಶ್ನೋತರ ವೇಳೆಯಲ್ಲಿ, ನಾಮ ನಿರ್ದೇಶಿತ ಬಿಜೆಪಿ ಸದಸ್ಯ, ಶ್ರೀ ಅಡಗೂರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಕೆ ಎಸ ಆರ್ ಪಿ ಬೆಂಗಳೂರು ಒಂದನೇ ಘಟಕದಳ್ಳಿ ನಡೆಸುತ್ತಿರುವ ಕ್ಯಾಂಟೀನ್ ನಲ್ಲಿ ಸುಮಾರು ೨೭ ಲಕ್ಷಕ್ಕೂ ಹೆಚ್ಚಿನ ಹಣ ದುರ್ವ್ಯವಹಾರ ನಡೆದಿರುವುದನ್ನು ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಹಾಗೂ ಈ ಸಂಬಂಧ ಸುಮಾರು ೧೭ ಲಕ್ಷ ರೂಪಾಯಿಗಳನ್ನು ಮರು ಪಾವತಿಸಲಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದಲ್ಲದೆ, ಸೇವೆಯಿಂದ ಅಮಾನತು ಗೊಳಿಸಲಾಗುವುದು ಎಂದೂ, ಸಚಿವರು, ಸದನಕ್ಕೆ ತಿಳಿಸಿದರು.

“ಮಾನ್ಯ ಸದಸ್ಯರು, ಹಣ ದುರುಪಯೋಗ ಪ್ರಕರಣವನ್ನು ಸರಕಾರದ ಗಮನಕ್ಕೆ ತಂದು, ನಮ್ಮ ಕಣ್ಣು ತೆರೆಸಿದ್ದಾರೆ” ಎಂದೂ ಸಚಿವರು, ಈ ಸಂಧರ್ಭದಲ್ಲಿ ಹೇಳಿದರು.

bengaluru
bengaluru

LEAVE A REPLY

Please enter your comment!
Please enter your name here