Home ಅಪರಾಧ ಬೆಂಗಳೂರಿನ ಹೊಸ ತರಗುಪೇಟೆಯಲ್ಲಿ ಕ್ರ್ಯಾಕರ್ ಸ್ಫೋಟಕ್ಕೆ 2 ಸಾವು

ಬೆಂಗಳೂರಿನ ಹೊಸ ತರಗುಪೇಟೆಯಲ್ಲಿ ಕ್ರ್ಯಾಕರ್ ಸ್ಫೋಟಕ್ಕೆ 2 ಸಾವು

175
0
Cracker blast kills 2 in Bengaluru's New Tharagupet

ಮೂವರಿಗೆ ಗಾಯ; ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು:

ಚಾಮರಾಜಪೇಟೆಯ ರಾಯನ್ ವೃತ್ತದಲ್ಲಿರುವ ಕೆಆರ್ ಮಾರ್ಕೆಟ್ ಸಮೀಪದ ಹೊಸ ತರಗುಪೇಟೆಯಲ್ಲಿ ಖಾಸಗಿ ಸಾರಿಗೆ ಸಂಸ್ಥೆಯ ಗೋಡೌನ್ ನಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಗುರುವಾರ ಮಧ್ಯಾಹ್ನ 11.30 ರ ಸುಮಾರಿಗೆ ನಡೆದಿದೆ.

ಮೂವರು ಗಾಯಗೊಂಡಿದ್ದು ಅವರನ್ನು ಹತ್ತಿರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Cracker blast kills 2 in Bengaluru's New Tharagupet

ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಪೊಲೀಸರ ಪ್ರಕಾರ, ಶ್ರೀ ಪತ್ರ ಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋಡೌನ್ ನಲ್ಲಿ ಸುಮಾರು 80 ಬಾಕ್ಸ್ ಕ್ರ್ಯಾಕರ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಸ್ಫೋಟ ಸಂಭವಿಸಿದೆ.

ಡಿಸಿಪಿ (ದಕ್ಷಿಣ) ಹರೀಶ್ ಪಾಂಡೆ ಅವರು ಸ್ಫೋಟದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಡ ಪಡಿಸಿದರು, ಅವರಲ್ಲಿ ಒಬ್ಬರು ಗೋದಾಮು ಬಳಿಯ ಪಂಕ್ಚರ್ ಅಂಗಡಿಗೆ ಸೇರಿದವರು.

Also Read: Cracker blast kills 2 in Bengaluru’s New Tharagupet

LEAVE A REPLY

Please enter your comment!
Please enter your name here