ಪ್ರಾತಿನಿಧಿಕ ಉದ್ದೇಶಕ್ಕೆ ಮಾತ್ರ: ಹಕ್ಕಿಪಿಕ್ಕಿ ಸಮುದಾಯದವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ. ಚಿತ್ರ: ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 95 ಮಂದಿಯನ್ನು ಕಾಂಗೋದಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಸಮುದಾಯದವರು ಸರಕಾರದ ನೆರವನ್ನು ಕೋರಿದ್ದಾರೆ.
ವರದಿಗಳ ಪ್ರಕಾರ, ವಶಕ್ಕೆ ಪಡೆದವರಲ್ಲಿ ಶಿವಮೊಗ್ಗದ 70 ಮಂದಿ ಹಾಗೂ ಚನ್ನಗಿರಿಯ 25 ಮಂದಿ ಸೇರಿದ್ದಾರೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನೆರವಾಗುವಂತೆ ಸಮುದಾಯದ ಸಂಘಟನೆಯ ಮುಖಂಡ ಆರ್. ಪುನೀತ್ ಕುಮಾರ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
