ಸಂಗ್ರಹ ಚಿತ್ರ: ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಪ್ರಯಾಣಿಕರು. ಚಿತ್ರ: ಸರಬರಾಜು
ಬೆಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ಕಾನ್ಪುರ ಸೆಂಟ್ರಲ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲುಗಳನ್ನು ಉತ್ತರ ಮಧ್ಯ ರೈಲ್ವೆ ವಿಸ್ತರಿಸಿದೆ ಎಂದು ನೈರುತ್ಯ ರೈಲ್ವೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 04131 ಕಾನ್ಪುರ ಸೆಂಟ್ರಲ್–ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ರೈಲು ನವೆಂಬರ್ 22ರಿಂದ ಡಿಸೆಂಬರ್ 27ರವರೆಗೆ ಪ್ರತಿ ಭಾನುವಾರ ಸಂಚರಿಸಲಿದೆ.
ರೈಲು ಸಂಖ್ಯೆ 04132 ಎಸ್ಎಂವಿಟಿ ಬೆಂಗಳೂರು–ಕಾನ್ಪುರ ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು ನವೆಂಬರ್ 25ರಿಂದ ಡಿಸೆಂಬರ್ 30ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ.
ವಿಸ್ತರಿತ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್ ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
