Home ಮಂಡ್ಯ ದ್ವೀಪನಗರಿಯಲ್ಲಿ ಗ್ರಂಥಾಲಯ ಉದ್ಘಾಟಿಸಿರುವುದು ಸಂತಸ ನೀಡಿದೆ: ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ರೀತು ರಾಜ್ ಅವಸ್ಥಿ

ದ್ವೀಪನಗರಿಯಲ್ಲಿ ಗ್ರಂಥಾಲಯ ಉದ್ಘಾಟಿಸಿರುವುದು ಸಂತಸ ನೀಡಿದೆ: ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ರೀತು ರಾಜ್ ಅವಸ್ಥಿ

74
0
Karnataka High Court Chief Justice Ritu Raj Awasthi inaugurated Library in Mandya Court

ಮಂಡ್ಯ:

ದ್ವೀಪನಗರಿ ಶ್ರೀರಂಗಪಟ್ಟಣದ ಐತಿಹಾಸಿಕ ನ್ಯಾಯಾಲಯದಲ್ಲಿ ಗ್ರಂಥಾಲಯ ಉದ್ಘಾಟಿಸಿರುವುದು ಮನಸ್ಸಿಗೆ ಸಂತಸ ನೀಡಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ರೀತು ರಾಜ್ ಅವಸ್ಥಿ ತಿಳಿಸಿದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಗ್ರಂಥಾಲಯ ಉದ್ಗಾಟನೆ ನಡೆಸಿ ಬಳಿಕ ಅವರು ಮಾತನಾಡಿದರು. ರಾಜ ಮಹಾರಾಜ ಸುಲ್ತಾನರು ಆಳಿದ ಕಾವೇರಿ ನದಿ ಸುತ್ತುವರಿದ ಸುಂದರ ದ್ವೀಪನಗರಿ ಹಾಗೂ ಇಲ್ಲಿನ ಪ್ರತಿಯೊಂದು ಸ್ಮಾರಕಗಳು ಮತ್ತು ಸರ್ವಧರ್ಮಗಳ ದೇವಾಲಯಗಳ ಅನ್ಯೋನ್ಯತೆಯ ವಿಚಾರ ಹರ್ಷ ನೀಡಿದೆ.ಇಂತಹ ನೆಲೆಯಲ್ಲಿ ಜ್ಞಾನವಿಕಾಸಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಮತ್ತು ತಾಲೂಕಿನ ವಕೀಲರ ಸಂಘದ ಸಹಕಾರದೊಂದಿಗೆ ಮಹತ್ವಪೂರ್ಣ ಉದ್ದೇಶದಿಂದ ಭವ್ಯ ಕಟ್ಟಡ ನಿರ್ಮಿಸಿಕೊಟ್ಟಿರುವ ರಾಜ್ಯ ಸರ್ಕಾರ, ಜಿಲ್ಲೆಯ ಸಂಸದರು ಮತ್ತು ಜನಪ್ರನಿಧಿಗಳು ಹಾಗೂ ಜಿಲ್ಲಾಡಳಿತದ ಶ್ರಮ ಯಶಸ್ಸುಪಡೆದಿದೆ. ಈ ಗ್ರಂಥಾಲಯದ ಅನೂಕೂಲತೆಯಿಂದ ನೊಂದು ನ್ಯಾಯ ಬಯಸಿ ಬರುವ ಎಲ್ಲರಿಗೂ ಸೇವೆ ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ ೨೦೨೦-೨೧ ಸಾಲಿನಲ್ಲಿ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ೪೩೦ಕೋಟಿ ಪ್ರಸ್ತಾವನೆ ಸಲ್ಲಿಸಿ ಅದನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಮಂಡ್ಯ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕಾಗಿ ಹಲವು ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿ ಈ ಬಗ್ಗೆ ಸರ್ಕಾರ ಚರ್ಚಿಸಿ ಕ್ರಮವಹಿಸಲು ಚರ್ಚಿಸುವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ಯುವಕ ಯುವತಿ ವಕೀಲರಿಗೆ ಪ್ರತಿ ತಿಂಗಳು ೧೦ ಸಾವಿರ ಹಾಗೂ ಒಬಿಸಿ ವರ್ಗದ ವಕೀಲರಿಗೆ ಪ್ರತಿ ತಿಂಗಳು ಮಂಡ್ಯ ಜಿಲ್ಲೆ ಅತ್ಯಾಚಾರ ೨ ಸಾವಿರ ಅನುದಾನ ನೀಡಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರದಂತಹ ಪ್ರಕರಣಗಳನ್ನು ಬಗೆಹರಿಸಲು ಜಿಲ್ಲೆಯಲ್ಲಿ ಈಗಾಗಲೇ ೨ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ತ್ವರಿತವಾಗಿ ಕಠಿಣ ಶಿಕ್ಷೆ ಕೊಡಿಸಿ, ನೊಂದ ಆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವುದು ವಕೀಲರ ಕೈಯಲ್ಲಿದೆ. ಹೀಗಾಗಿ ತಕ್ಷಣ ಆ ಎಲ್ಲಾ ಕೇಸ್‌ಗಳನ್ನು ತೆಗೆದುಕೊಂಡು ಇಂತಹ ಪ್ರಕರಣಗಳು ಕಡಿಮೆ ಮಾಡುವತ್ತ ಒತ್ತನ್ನು ನೀಡಬೇಕು ಎಂದು ವಿನಂತಿಸಿದರು. ಜತೆಗೆ ನಿಮ್ಮನ್ನು ನಂಬಿ ನ್ಯಾಯಾಲಯಕ್ಕೆ ಬರುವ ಗ್ರಾಮೀಣ ಭಾಗದ ಹಾಗೂ ರೈತಾಪಿ ಜನರಿಗೆ ನ್ಯಾಯ ದೊರಕಿಸಿ ಎಂದರು.

ಇದನ್ನೂ ಓದಿ: ಮಂಡ್ಯಕ್ಕೆ ಮಂಜೂರಾದ 8 ಕೋರ್ಟ್ ಕಟ್ಟಡಕ್ಕೆ ಸ್ಥಳ ನೀಡಿ: ಸರ್ಕಾರಕ್ಕೆ ಶಾಸಕ ದಿನೇಶ್ ಗೂಳಿಗೌಡ ಮನವಿ

ಕಾರ್ಯಕ್ರಮದಲ್ಲಿ ಹೈಕೋರ್ಟ್ ಆಡಳಿತಾತ್ಮಕ ನ್ಯಾಯಾಧೀಶ ಪಿ.ಎಸ್.ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನ್ಯಾಯಮೂರ್ತಿ ಬಿ.ಎಂ.ಶ್ಯಾಮುಪ್ರಸಾದ್, ನ್ಯಾಯಮೂರ್ತಿ ಟಿ.ಎಸ್.ಇಂದ್ರೇಶ್, ಸಿದ್ದಯ್ಯ ರಾಚಯ್ಯ, ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಹೈಕೋರ್ಟ್ ರಿಜಿಸ್ಟಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ,ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಿಶಾಲ್ ರಘು ಉಪಸ್ಥಿತಿ ವಹಿಸಿದ್ದರು.

ಶ್ರೀರಂಗಪಟ್ಟಣದ ೩ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ, ನ್ಯಾಯಾಧೀಶರುಗಳಾ ಪ್ರಕಾಶ್ ಸಂಗಪ್ಪ ಹೆಳವರ್, ದೇವರಾಜ್, ಆಯಿಷಾ ಪಿ. ಮಸ್ಜಿದ್, ವಕೀಲರ ಸಂಘದ ಅಧ್ಯಕ್ಷ ಎ.ಕುಮಾರ್, ಉಪವಿಭಾಗಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಸೇರಿದಂತೆ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here