Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಧಾರವಾಡ
  • ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ
  • ಧಾರವಾಡ

ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ

The Bengaluru Live February 13, 2022 7:15 PM 1 minute read
Karnataka CM says Nadoja Chennaveer Kanavi's health is recovering

ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಅವರ ಚಿಂತನೆಗಳು ನಾಡಿಗೆ ಮತ್ತೆ ದೊರಕುವಂತಾಗಲಿ-ಮುಖ್ಯಮಂತ್ರಿ

ಧಾರವಾಡ:

ಕಳೆದ ಒಂದು ತಿಂಗಳಿನಿಂದ ತೀವ್ರ ಅಸ್ವಸ್ಥರಾಗಿರುವ ಹೆಸರಾಂತ ಕವಿ,ನಾಡೋಜ ಡಾ.ಚೆನ್ನವೀರ ಕಣವಿ ಅವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ.ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ, ಮುಂದಿನ 3-4 ದಿನಗಳಲ್ಲಿ ಇನ್ನಷ್ಟು ಆರೋಗ್ಯ ಸುಧಾರಿಸುವ ಭರವಸೆ ಇದೆ.ಕಣವಿ ಅವರ ಚಿಂತನೆಗಳು ನಾಡಿಗೆ ಮತ್ತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.

ಧಾರವಾಡದ ಸತ್ತೂರಿನ‌ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಭೇಟಿ ನೀಡಿ,ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕವಿ ಡಾ.ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ @BSBommai ಅವರು ಇಂದು ಧಾರವಾಡದ ಸತ್ತೂರಿನ ಎಸ್.ಡಿ.ಎಂ. ಆಸ್ಪತ್ರೆಗೆ ಭೇಟಿ ನೀಡಿ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಡಾ. ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಸಚಿವರಾದ @GovindKarjol ಉಪಸ್ಥಿತರಿದ್ದರು. pic.twitter.com/Lp7mvECLBQ

— CM of Karnataka (@CMofKarnataka) February 13, 2022

ಕಳೆದ ಒಂದು ತಿಂಗಳ ಹಿಂದೆ ನ್ಯುಮೋನಿಯಾ ಖಾಯಿಲೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆರ್‌ಟಿಪಿಸಿಆರ್ ತಪಾಸಣೆಯಿಂದ ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು.ನಂತರ ಕೋವಿಡ್ ನೆಗೆಟಿವ್ ಆಗಿದೆ.ಮುಂದಿನ 3-4 ದಿನಗಳಲ್ಲಿ ನ್ಯಮೋನಿಯಾ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಭರವಸೆಯಿದೆ.ಹಿರಿಯರಾದ ಕಣವಿ ಅವರು ಬಹಳಷ್ಟು ಗಟ್ಟಿತನದಿಂದ ಚಿಕಿತ್ಸೆಗೆ ಸ್ಪಂದಿಸುತ್ತ,ಹೋರಾಟ ನಡೆಸುತ್ತಿದ್ದಾರೆ. ಆರೋಗ್ಯ ಚೇತರಿಕೆ ಬಗ್ಗೆ ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರಳ – ಸಜ್ಜನಿಕೆಗೆ ಹೆಸರಾಗಿರುವ ಕಣವಿ ಅವರ ಚಿಂತನೆಗಳಿಂದ ನಾಡಿಗೆ ಮತ್ತೆ ಪ್ರೇರಣೆ ದೊರೆಯುವಂತಾಗಲಿ ಎಂಬ ಆಶಯ,ಭರವಸೆ ಇದೆ.ಅವರ ಕುಟುಂಬದೊಂದಿಗೆ ತಮಗೆ ದೀರ್ಘ ಕಾಲದ ಆತ್ಮೀಯ ಒಡನಾಟ ಇದೆ.ಸರ್ಕಾರದ ವೆಚ್ಚ,ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಸ್.ಡಿ.ಎಂ‌. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಶೀಘ್ರ ಗುಣಮುಖರಾಗಿ,ಚೇತರಿಸಿಕೊಳ್ಳಲಿ ಎಂದು ಮುಖ್ಯಮಂತ್ರಿಯವರು ಹಾರೈಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಭೂರಾಮ್,ಎಸ್.ಡಿ.ಎಂ.ವಿ.ವಿ.ಕುಲಪತಿ ಡಾ.ನಿರಂಜನಕುಮಾರ ಮತ್ತಿತರರು ಇದ್ದರು.

About the Author

The Bengaluru Live

Administrator

Visit Website View All Posts

Post navigation

Previous: ದ್ವೀಪನಗರಿಯಲ್ಲಿ ಗ್ರಂಥಾಲಯ ಉದ್ಘಾಟಿಸಿರುವುದು ಸಂತಸ ನೀಡಿದೆ: ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ರೀತು ರಾಜ್ ಅವಸ್ಥಿ
Next: ಫೆ.14ರಂದು ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶ

Related Stories

ಯೋಗೇಶ್ ಗೌಡ ಹತ್ಯೆ ಪ್ರಕರಣ ತೀರ್ಪು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಆರೋಪಿಗಳಿಗೆ ದೋಷಿ ತೀರ್ಪು
  • ರಾಜಕೀಯ
  • ಅಪರಾಧ
  • ಧಾರವಾಡ
  • ಬೆಂಗಳೂರು ನಗರ
  • ಹುಬ್ಬಳ್ಳಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ತೀರ್ಪು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಆರೋಪಿಗಳಿಗೆ ದೋಷಿ ತೀರ್ಪು

The Bengaluru Live April 15, 2026 6:19 PM
Lokayukta Police Inspector Burnt Alive After Car Bursts Into Flames on Dharwad Highway
  • ಅಪರಾಧ
  • ಧಾರವಾಡ
  • ಹುಬ್ಬಳ್ಳಿ

ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕಾರಿನಲ್ಲೇ ಸುಟ್ಟು ದುರ್ಮರಣ

The Bengaluru Live December 5, 2025 11:45 PM
Seven killed, 10 injured as car collides with tree in Dharwad
  • ಧಾರವಾಡ

ಕರ್ನಾಟಕ: ಧಾರವಾಡದಲ್ಲಿ ಮರಕ್ಕೆ ವಾಹನ ಡಿಕ್ಕಿ ಹೊಡೆದು 7 ಮಂದಿ ಸಾವು, 10 ಮಂದಿಗೆ ಗಾಯ

The Bengaluru Live May 21, 2022 4:00 PM

Latest Post

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

November 11, 2026 1:28 AM
ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

November 11, 2026 1:14 AM
ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್ ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

November 11, 2026 12:25 AM
ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

November 10, 2026 11:27 PM
ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರ ಮತ್ತು ಬನ್ನೇರುಘಟ್ಟದಲ್ಲಿ ನೀರಾನೆ ಮರಿಯ ಸಮೀಕ್ಷಾ ನಾಮಫಲಕದ ಬಳಿಯ ಸಂದರ್ಶಕರು
  • ಕರ್ನಾಟಕ
  • ಬೆಂಗಳೂರು ನಗರ

ಡಾ. ಸಮೀಕ್ಷಾ ರೆಡ್ಡಿ ಯಾರು? ಬನ್ನೇರುಘಟ್ಟದಲ್ಲಿ ಅವರ ಸ್ಮರಣೆಗೆ ರಾಮಲಿಂಗಾ ರೆಡ್ಡಿ ಶಿಫಾರಸು

November 10, 2026 10:14 PM
ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ ಪರಿಶೀಲನೆಯ ವೇಳೆ ಜೈವಿಕ ಅನಿಲ ಘಟಕದಲ್ಲಿ ಹಸಿರು ಚೌಕಟ್ಟಿನ ಗ್ಯಾಸ್ ಸಿಲಿಂಡರ್‌ಗಳ ಸುತ್ತ ನಿಂತಿರುವ ಪುರುಷರು
  • ಬೆಂಗಳೂರು

ನ.13ರಂದು ಬೆಂಗಳೂರಿನಲ್ಲಿ ₹160 ಕೋಟಿ ವೆಚ್ಚದ ಸಂಕುಚಿತ ಜೈವಿಕ ಅನಿಲ ಘಟಕಕ್ಕೆ ಪ್ರಧಾನಿ ಮೋದಿ ವರ್ಚುವಲ್ ಶಿಲಾನ್ಯಾಸ

November 10, 2026 5:55 PM

ನೀವು ತಪ್ಪಿಸಿಕೊಂಡಿರಬಹುದು

ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ

The Bengaluru Live November 11, 2026 1:14 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM
ವಿಧಾನಸೌಧದಲ್ಲಿ ಮಧ್ಯಂತರ ಬರ ಪರಿಹಾರ ಪಾವತಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ

The Bengaluru Live November 10, 2026 11:27 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ
  • ಬಿಹಾರ ಕಾರ್ಟ್ರಿಡ್ಜ್ ವಶ ಪ್ರಕರಣದ ಚಿತ್ರಕ್ಕೆ ಆಕ್ಷೇಪ: ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ, ಗಿರೀಶ್ ಭಾರದ್ವಾಜ್ ವಾಗ್ದಾಳಿ
  • ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್
  • ಕರ್ನಾಟಕ ಬರ ಪರಿಹಾರ: ₹5,000 ಪಾವತಿ ಕುರಿತು ಶಿವಕುಮಾರ್ ಸ್ಪಷ್ಟನೆ, ಮೊದಲ ಕಂತಿನ ಮೊತ್ತದ ಬಗ್ಗೆ ಅಶೋಕ ಪ್ರಶ್ನೆ
©Copyright 2025 The Bengaluru Live All rights reserved. | MoreNews by AF themes.