Home ಕರ್ನಾಟಕ ಕೊರೋನಾ ಶುಶ್ರೂಷೆಯಲ್ಲಿ ಭಾಗಿಯಾದ ವೈದ್ಯರು, ವಾರಿಯರ್ಸ್’ಗಳಿಗೆ ಸಚಿವ ವಿ.ಸೋಮಣ್ಣ ಅವರಿಂದ ಆಹಾರ ಧಾನ್ಯ ಕಿಟ್ ಹಂಚಿಕೆ

ಕೊರೋನಾ ಶುಶ್ರೂಷೆಯಲ್ಲಿ ಭಾಗಿಯಾದ ವೈದ್ಯರು, ವಾರಿಯರ್ಸ್’ಗಳಿಗೆ ಸಚಿವ ವಿ.ಸೋಮಣ್ಣ ಅವರಿಂದ ಆಹಾರ ಧಾನ್ಯ ಕಿಟ್ ಹಂಚಿಕೆ

48
0

ಬೆಂಗಳೂರು:

ಕೊರೋನಾ ಸೋಂಕು ಭಯಾನಕ ವಾತಾವರಣವನ್ನು ಸೃಷ್ಟಿಸಿದ್ದಾಗಲೂ, ಅಳುಕದೆ ತಮ್ಮ ಜೀವದ ಹಂಗನ್ನು ಮರೆತು ಸೇವೆಸಲ್ಲಿಸಿದ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಇನ್ನಿತರ ಕೊರೋನಾ ವಾರಿಯರ್ಸ್’ಗಳಿಗೆ ನಾನು ಕೈ ಮುಗಿಯುತ್ತೇನೆ, ನನ್ನ ಕ್ಷೇತ್ರದ ಜನರ ಯೋಗಕ್ಷೇಮ ನೋಡಿಕೊಂಡ ನಿಮಗೆಲ್ಲ ನಾನು ಆಭಾರಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ವಿಜಯನಗರ ಎಂ.ಸಿ.ಬಡಾವಣೆಯಲ್ಲಿರುವ ಬಿ.ಜಿ.ಎಸ್.ಆಟದ ಮೈದಾನದಲ್ಲಿ ಕೊರೋನಾ ವಾರಿಯರ್ಸ್’ಗಳಿಗೆ ಹಾಗೂ ಆ ಪ್ರದೇಶದ ಸಾರ್ವಜನಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಸಚಿವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರನೆ ಅಲೆ ತಡೆಯಲು ಸನ್ನದ್ಧವಾಗಿದ್ದು, ಮಕ್ಕಳಿಗಾಗಿಯೇ 20 ಹಾಸಿಗೆಗಳ ವಿಶೇಷ ಆಸ್ಪತ್ರೆ ರೂಪಿಸುತ್ತಿರುವುದಾಗಿ ಪ್ರಕಟಿಸಿದರು. ಸಾಮಾನ್ಯ ಜನರ ಜೀವ ರಕ್ಷಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸಿದೆ, ಸಾರ್ವಜನಿಕರೂ ಎಚ್ಚರದಿಂದಿರಬೇಕು, ಮುಂದಿನ ಹದಿನೈದು ದಿನಗಳ ಕಾಲ ಜನತೆ ಕಟ್ಟಿನಿಟ್ಟಾದ ನಿಯಮಗಳನ್ನು ಪಾಲಿಸುವ ಮೂಲಕ ಕೊರೋನಾ ಸೋಂಕನ್ನು ದೂರ ಮಾಡಲು ಸಹಕರಿಸಬೇಕು ಎಂದೂ ಅವರು ಮನವಿ ಮಾಡಿದರು.

Karnataka Housing Minister V Somanna distributes Food Grain Kits Covid Warriors2

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ ಬಡಾವಣೆಯಲ್ಲಿ 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಕೆಲವೇ ದಿನಗಳಲ್ಲಿ ಕಾರ್ಯಾರಂಭಿಸಲಿದೆ ಎಂದು ಹೇಳಿದ ಸಚಿವರು, ಈ ಆಸ್ಪತ್ರೆಯನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಪಂತರಪಾಳ್ಯದಲ್ಲಿ 150 ಹಾಸಿಗೆ ಮತ್ತು ನಾಗರಭಾವಿಯಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಗಳು ಆರಂಭಗೊಳ್ಳಲಿವೆ ಎಂದೂ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾಧಿತರಾದ 40,000 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ ಎಂದು ಹೇಳಿದ ಸಚಿವರು ಕಾರ್ಯಕರ್ತರ ಉತ್ಸಾಹಕ್ಕೆ ಧನ್ಯವಾದ ಸಮರ್ಪಿಸಿದರು. ಆರೋಗ್ಯಾಧಿಕಾರಿಗಳು ಮುಂತಾದ ಕೊರೋನಾ ವಾರಿಯರ್ಸ್’ಗಳಿಗೆ ಸಚಿವರು ಆಹಾರ ಧಾನ್ಯ ಕಿಟ್ ವಿತರಿಸಿದರು.

Karnataka Housing Minister V Somanna distributes Food Grain Kits Covid Warriors

ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ.ಯುವ ಮೋರ್ಚಾ ಮುಖಂಡ ಡಾ.ಅರುಣ್ ಸೋಮಣ್ಣ, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟ, ಮೋಹನ್ ಕುಮಾರ್, ವಾಗೇಶ್, ರಾಮಪ್ಪ ದಾಸೇಗೌಡ, ಶಂಕುತಲ ಡೊಡ್ಡಲಕ್ಕಪ್ಪ, ಗೋವಿಂದರಾಜನಗರ ಬಿ.ಜೆ.ಪಿ.ಮಂಡಲದ ಅಧ್ಯಕ್ಷ ವಿಶ್ವನಾಥಗೌಡ, ಬಿ.ಜೆ.ಪಿ.ಮುಖಂಡ ಉಮಾಶಂಕರ್, ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ಭಾಗವಹಿಸಿದ್ದರು .

LEAVE A REPLY

Please enter your comment!
Please enter your name here