Home ಬೆಂಗಳೂರು ನಗರ Indradhanush 5.0 in Karnataka: ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ

Indradhanush 5.0 in Karnataka: ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ

51
0
Karnataka: Intensified Mission Indradhanush 5.0 campaign
Karnataka: Intensified Mission Indradhanush 5.0 campaign

ಬೆಂಗಳೂರು:

ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ, ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆಗಳನ್ನು ಕಾಲಕಾಲಕ್ಕೆ ಪಡೆಯದೆ ವಂಚಿತರಾದ 0-5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ತೀವ್ರತರವಾದ ಇಂದ್ರಧನುಷ್ ಲಸಿಕಾ ಅಭಿಯಾನ 5.0 ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಅಭಿಯಾನದಲ್ಲಿ ಲಸಿಕೆ ಪಡೆಯದೇ ವಂಚಿತರಾಗಿರುವ, ಬಿಟ್ಟು ಹೋಗಿರುವ, ಅಪಾಯದಲ್ಲಿರುವ ಪ್ರದೇಶಗಳನ್ನು ಮತ್ತು ಸಮುದಾಯಗಳನ್ನು ಗುರುತಿಸಿ ಅವರನ್ನು ತಲುಪುವತ್ತ ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕಾಗಿದೆ. ವಿಶೇಷವಾಗಿ ದಢಾರ, ರುಬೆಲ್ಲಾ ಲಸಿಕಾಕರಣ, ಪಿಸಿವಿ ಲಸಿಕಾಕರಣ ಮತ್ತು ಇತ್ತೀಚಿಗೆ 3ನೇ ಡೋಸ್ ಆಗಿ ಸೇರ್ಪಡೆಗೊಳಿಸಿರುವ ಎಫ್‍ಐಪಿವಿ ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ತೀವ್ರತರವಾದ ಇಂದ್ರಧನುಷ್ ಅಭಿಯಾನ 5.0 ನ್ನು ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು 2023 ರ ಆಗಸ್ಟ್ 7 ರಿಂದ 12 ರವರೆಗೆ, ಸೆಪ್ಟೆಂಬರ್ 12 ರಿಂದ 16ರವರೆಗೆ ಮತ್ತು ಅಕ್ಟೋಬರ್ 9 ರಿಂದ 14 ರವರೆಗೆ ಈ ತಿಂಗಳುಗಳಲ್ಲಿ ನಿರ್ಧಿಷ್ಟ 6 ದಿನಗಳಂದು ಸಾರ್ವತ್ರಿಕ ಲಸಿಕಾಕಾರ್ಯಕ್ರಮದ ಲಸಿಕಾ ಕಾರ್ಯಕ್ರಮದ ದಿನಗಳನ್ನು ಒಳಗೊಂಡಂತೆ ರಾಜ್ಯದ ಎಲ್ಲಾ 32 ಜಿಲ್ಲೆಗಳಲ್ಲಿ ಮೂರು ಸುತ್ತುಗಳಲ್ಲಿ ತೀವ್ರತರವಾದ ಇಂದ್ರಧನುಷ್ ಅಭಿಯಾನ 5.0 ಅನ್ನು ನಡೆಸಲು ತೀರ್ಮಾನಿಸಲಾಗಿರುತ್ತದೆ.

ತೀವ್ರತರವಾದ ಮಿಷನ್ ಇಂದ್ರಧನುಷ್ 50 ಕಾರ್ಯಕ್ರಮದ ಮುಖ್ಯ ಅಂಶಗಳು:

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಅನುಸಾರ ವಯಸಿಗೆ ಅನುಗುಣವಾಗಿ ಲಸಿಕೆ ಪಡೆಯದ / ಬಿಟ್ಟುಹೋದ / ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ರಲ್ಲಿ ಲಸಿಕೆ ನೀಡಲಾಗುವುದು.

ವಿಶೇಷವಾಗಿ ದಢಾರ – ರುಬೆಲ್ಲಾ ರೋಗ ನಿರೋಧಕತೆಯ ಅಂತರವನ್ನು ಕಡಿಮೆ ಮಾಡಲಾಗುವುದು ದುರ್ಬಲ ಸಮುದಾಯವನ್ನು ತಲುಪುವುದು ಸಮುದಾಯ ಪಾಲ್ಗೊಳ್ಳುವಿಕೆ, ಸಾರ್ವತಿಕ ಲಸಿಕಾ ವೇಳಾಪಟ್ಟಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಪಿಸಿವಿ ಲಸಿಕೆ ಮತ್ತು 3ನೇ ಡೋಸ್ ಆಗಿ ಸೇರ್ಪಡೆಗೊಳಿಸಿದ ಎಫ್‍ಐಪಿವಿ ಲಸಿಕಾಕರಣದ ಪ್ರಗತಿಯನ್ನು ಹಾಗೂ ಡಿಪಿಟಿ ಬೂಸ್ಟರ್ ಅನ್ನು ಓಪಿವಿ ಬೂಸ್ಟರ್ ಲಸಿಕೆಗಳ ಪ್ರಗತಿಯನ್ನು ಹೆಚ್ಚಿಸಲಾಗುವುದು. ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ರಲ್ಲಿ ನೀಡಲಾದ ಲಸಿಕೆಗಳ ವಿವರವನ್ನು U-WIN ಪೋರ್ಟ್‍ಲ್ ನಲ್ಲಿ ದಾಖಲಿಸಿ ಇ-ಲಸಿಕಾಕರಣದ ಪ್ರಮಾಣ ಪತ್ರ ಸೃಜಿಸಲಾಗುವುದು.

ಲಸಿಕೆ ಬಾಕಿ ಇರುವ / ಲಸಿಕೆ ಬಿಟ್ಟು ಹೋಗಿರುವ / ಲಸಿಕೆ ವಂಚಿತರಾಗಿರುವ ಮಕ್ಕಳಿಗೆ ಹಾಗು ಗರ್ಭಿಣಿಯರಿಗೆ ಲಸಿಕೆ ಹಾಕಿಸುವಲ್ಲಿ ಎಲ್ಲರ ಸಹಕಾರ ಮಹತ್ವದಾಗಿರುತ್ತದೆ. ಆದ್ದರಿಂದ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಸಂವಹನ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿ ಮೂಲ: ಕರ್ನಾಟಕ ವಾರ್ತೆ

LEAVE A REPLY

Please enter your comment!
Please enter your name here