Home ಬೆಂಗಳೂರು ನಗರ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿ ಎ.ಅಮೃತ್ ರಾಜ್ ಅವಿರೋಧ ಆಯ್ಕೆ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿ ಎ.ಅಮೃತ್ ರಾಜ್ ಅವಿರೋಧ ಆಯ್ಕೆ

91
0
A. Amrut Raj elected unopposed as President of BBMP Officers and Employees Welfare Development Association
A. Amrut Raj elected unopposed as President of BBMP Officers and Employees Welfare Development Association

ಬೆಂಗಳೂರು:

ಸುದ್ದಿ ಮೂಲ: ಶೇಷ ನಾರಾಯಣ, ಪತ್ರಕರ್ತ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿ ಎ.ಅಮೃತ್ ರಾಜ್ ಅವರು ಅವಿರೋಧ ಆಯ್ಕೆ ಆಗಿದ್ದಾರೆ. ಇತರ ಪದಾಧಿಕಾರಿ ಸ್ಥಾನಗಳಿಗೆ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇಂದು ಕೇಂದ್ರ ಕಛೇರಿ ನೌಕರರ ಭವನದಲ್ಲಿ ನೂತನವಾಗಿ ಆಯ್ಕೆಯಾದ 17ನಿರ್ದೇಶಕರುಗಳಿಗೆ ಚುನಾವಣಾಧಿಕಾರಿ ಚಂದ್ರಶೇಖರ್ ರವರು ಪ್ರಮಾಣ ಪತ್ರ ವಿವರಿಸಿದರು.

ಇದನ್ನೂ ಓದಿ: BBMP Employees Election: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಚುನಾವಣೆಯಲ್ಲಿ ಎ.ಅಮೃತ್ ರಾಜ್ ತಂಡ ಜಯಭೇರಿ

ಅಧ್ಯಕ್ಷ : ಎ.ಅಮೃತ್ ರಾಜ್.
ಉಪಾಧ್ಯಕ್ಷ: ಡಿ.ರಾಮಚಂದ್ರ ಮತ್ತು ಡಾ.ಶೋಭಾ.
ಪ್ರಧಾನ ಕಾರ್ಯದರ್ಶಿ: ಕೆ.ಜಿ.ರವಿ.
ಖಜಾಂಚಿ: ಸೋಮಶೇಖರ್ ಎನ್.ಎಸ್
ಕಾರ್ಯಧ್ಯಕ್ಷ: ಬಿ.ರುದ್ರೇಶ್
ಜಂಟಿ ಕಾರ್ಯದರ್ಶಿ: ಹೆಚ್.ಕೆ.ತಿಪ್ಪೇಶ್ ಮತ್ತು ಕೆ.ನರಸಿಂಹ
ಸಂಘಟನಾ ಕಾರ್ಯದರ್ಶಿ: ಎಸ್.ಜಿ.ಸುರೇಶ್ ಮತ್ತು ಕೆ.ಮಂಜೇಗೌಡ
ಸಂಚಾಲಕರಾಗಿ ಆರ್.ರೇಣುಕಾಂಬ

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎ.ಅಮೃತ್ ರಾಜ್ ರವರು ಮಾತನಾಡಿ ಅಧಿಕಾರಿ ಮತ್ತು ನೌಕರರು ನಮ್ಮ ತಂಡದ ಸಾಧನೆ ಮತ್ತು ನೂತನ ಕಾರ್ಯಯೋಜನೆ ನಂಬಿಕೆ,ಪ್ರೀತಿ ವಿಶ್ವಾಸದಿಂದ ನಮ್ಮ ತಂಡದ 17ನಿರ್ದೇಶಕರುಗಳನ್ನು ಅತ್ಯಧಿಕ ಮತ ನೀಡಿ ಜಯಶಾಲಿಯಾಗಲು ಸಹಕಾರಿಸಿದರು. ವೃಂದ ಮತ್ತು ನೇಮಕಾತಿ ಸಮರ್ಪಕವಾಗಿ ಜಾರಿಗೆಯಾಗಬೇಕು ಬಿಬಿಎಂಪಿಯಲ್ಲಿ 6500ಖಾಲಿ ಹುದ್ದೆ ಭರ್ತಿ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

A. Amrut Raj elected unopposed as President of BBMP Officers and Employees Welfare Development Association

ಅಂಬ್ಯುಲೆನ್ಸ್ ಸಕಾಲಕ್ಕೆ ಸಿಗದೇ ಮುಖ್ಯ ಅಭಿಯಂತರರಾದ ಶಿವಕುಮಾರ್ ತತಕ್ಷಣ ಆಸ್ಪತ್ರೆ ದಾಖಲಿಸಲು ವಿಳಂಬವಾಯಿತು ಅದ್ದರಿಂದ ನಮ್ಮ ಸಂಘದಿಂದ ಅಧಿಕಾರಿ ನೌಕರರಿಗೆ ಎರಡು ಅಂಬ್ಯುಲೆನ್ಸ್ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುವುದು. ಅಧಿಕಾರಿ ಮತ್ತು ನೌಕರರಿಗೆ ಶುಭಾ ಕಾರ್ಯಗಳಿಗೆ ಉಚಿತವಾಗಿ ಸಮುದಾಯ ಭವನ ನಿರ್ಮಾಣ, ಫ್ರೀಡಂ ಪಾರ್ಕ್ ಅವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅತಿಶೀಘ್ರದಲ್ಲಿ ಲೋಕರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಮತ್ತು ಸಾರ್ವಜನಿಕರ ನಡುವೆ ಜನಸ್ನೇಹಿ ಆಡಳಿತ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪರಿಸರ ಸ್ನೇಹಿ ಗಣೇಶ ಹಬ್ಬ, ಪರಿಸರ ಕುರಿತು ಜನಜಾಗೃತಿ ಮೂಡಿಸಲು ಬೀದಿ ನಾಟಕ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮರದ ಕೊಂಬೆ ಬಿದ್ದು ಮೃತಪಟ್ಟ ಕುಟುಂಬದವರಿಗೆ ಸಹಾಯಹಸ್ತ ನಮ್ಮ ಸಂಘವು ಸಾರ್ವಜನಿಕರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ ಎಂದು ಅಮೃತ್ ರಾಜ್ ಹೇಳಿದರು.

ನವಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬವನ್ನು ನೇಪಾಳ ದೇಶದಲ್ಲಿ ಅಂತರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮೈಸೂರು ಸಂಸ್ಥಾನದ ಶ್ರೀ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಉದ್ಘಾಟನೆ ಮಾಡಲಿದ್ದಾರೆ. ಅಧಿಕಾರಿ ಮತ್ತು ನೌಕರರ ನೋವು, ಸಂಕಷ್ಟಗಳಿಗೆ ನಮ್ಮ ಸಂಘವು ಹೆಗಲಿಗೆ, ಹೆಗಲು ಕೊಟ್ಟು ಶ್ರಮಿಸಲಾಗುವುದು. ಚುನಾವಣೆಯಲ್ಲಿ 17ನಿರ್ದೇಶಕ ಸ್ಥಾನ ಅಭೂತಪೂರ್ವ ಗೆಲುವಿಗೆ ಬೆಂಬಲ, ಸಹಕಾರಿಸಿ ಅಧಿಕಾರಿ, ನೌಕರರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು.

LEAVE A REPLY

Please enter your comment!
Please enter your name here