Home ಬೆಂಗಳೂರು ನಗರ ಬಸವನಗುಡಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಶಾಸಕ ರವಿ ಸುಬ್ರಹ್ಮಣ್ಯ

ಬಸವನಗುಡಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಶಾಸಕ ರವಿ ಸುಬ್ರಹ್ಮಣ್ಯ

77
0
bengaluru

ಬೆಂಗಳೂರು:

ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ಹಾಗೂ ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ ರವರ ಮಾರ್ಗದರ್ಶನದಲ್ಲಿ, ನಿತ್ಯ ನಿರಂತರ ಸೇವಾ ಟ್ರಸ್ಟ್ (ರಿ) ವತಿಯಿಂದ ಕರೋನ ಸೇವೆಗಳಿಗಾಗಿ ಉಚಿತ 5 ಆಂಬ್ಯುಲೆನ್ಸ್ ಗಳ ಸೇವೆಗೆ ಇಂದು ಶ್ರೀನಗರ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.

ನಿತ್ಯ ನಿರಂತರ ಸೇವಾ ಟ್ರಸ್ಟ್ ಬಸವನಗುಡಿ ನಾಗರಿಕರ ಅನುಕೂಲಕ್ಕಾಗಿ ನೀಡಿರುವ ಈ ಸೇವೆ ಅಡಿಯಲ್ಲಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದ್ದು, ಕೋವಿಡ್ -19 ನಿರ್ವಹಣೆಗೆ ಇದರಿಂದ ಅನುಕೂಲವಾಗಲಿದೆ ಎಂದು ಶಾಸಕರಾದ ರವಿ ಸುಬ್ರಹ್ಮಣ್ಯ ತಿಳಿಸಿದರು.

ಈ ಸಂದರ್ಭದಲ್ಲಿ ನಿತ್ಯ ನಿರಂತರ ಸೇವಾ ಟ್ರಸ್ಟ್ ನ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದ ನಾಗರಿಕರು ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ಉಚಿತ ಆಂಬ್ಯುಲೆನ್ಸ್ ಸೇವೆ ಪಡೆಯಬಹುದು.

ರಾಜ್ ಗುರು- 97428 58998
ಕಿಶನ್- 98440 78232

LEAVE A REPLY

Please enter your comment!
Please enter your name here