ಗ್ರಾಮದಲ್ಲಿ ಪುತ್ಥಳಿ ನಿರ್ಮಾಣ
ಸರಕಾರದಿಂದ ಅಗತ್ಯ ನೆರವಿನ ಭರವಸೆ
ಬೀಳಗಿ (ಬಾಗಲಕೋಟೆ):
ಕರ್ತವ್ಯದ ಸಂದರ್ಭದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ಹಾಲಕುರ್ಕಿ ಗ್ರಾಮದ ಯೋಧ ಚಿದಾನಂದ ಚನ್ನಬಸಪ್ಪ ಶಿರಸ್ತೇದಾರ ( 25 ) ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತೀವ್ರ ಕಂಬಿನಿ ಮಿಡಿದಿದ್ದಾರೆ.
ಬಾಗಲಕೋಟೆ ಪ್ರವಾಸದಲ್ಲಿದ್ದ ಅವರು, ವಿಷಯ ತಿಳಿಯುತ್ತಿದ್ದಂತೆ ತಮ್ಮ ಅಧಿಕೃತ ಕಾರ್ಯಗಳನ್ನು ಮುಂದೂಡಿ ಯೋಧನ ಸ್ವಗ್ರಾಮ ಹಾಲಕುರ್ಕಿ ಗ್ರಾಮಕ್ಕೆ ತೆರಳಿದರು.
ಯೋಧನ ತಂದೆ ಚನ್ನಬಸಪ್ಪ, ತಾಯ ರತ್ನಮ್ಮ ಸಹೋದರ ಬಸವರಾಜ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದ ವೀರಯೋಧನ ಹಠಾತ್ ನಿಧನ ನಿಜಕ್ಕೂ ತುಂಬಾಲಾರದ ನಷ್ಟ ಎಂದು ನಷ್ಟ ಎಂದು ಕಂಬನಿ ಮಿಡಿದರು.
ಕುಟುಂಬಕ್ಕೆ ಆಸರೆಯಾಗಿದ್ದ ಯೋಧನನ್ನು ಕಳೆದುಕೊಂಡಿರುವುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಿಮ್ಮ ದುಃಖದಲ್ಲಿ ನಾನು ಒಬ್ಬನಾಗಿದ್ದೆನೆಂದು ಹೇಳಿದರು.
ಗ್ರಾಮಸ್ಥರ ಒತ್ತಾಸೆಯಂತೆ ಇದೇ ಗ್ರಾಮದಲ್ಲಿ ಯೋಧನ ಪುತ್ಥಳಿ ನಿರ್ಮಾಣ ಮಾಡಲು ತಾವೇ ವಿಶೇಷ ಆಸಕ್ತಿವಹಿಸಲಾಗುವುದು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆಸಿ ಆದಷ್ಟು ಶೀಘ್ರ ಪ್ರತಿಮೆಯನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.
ಬೀಳಗಿ ತಾಲ್ಲೂಕಿನ ಹಾಲಕುರ್ಕಿ ಗ್ರಾಮದ ವೀರಯೋಧ ಚಿದಾನಂದ ಚನ್ನಬಸಪ್ಪ ಶಿರಸ್ತೇದಾರ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಕುಟುಂಬದವರಿಗೆ ಸಾಂತ್ವನ ಹೇಳಿ, ಸರಕಾರದಿಂದ ಎಲ್ಲಾ ರೀತಿಯ ನೆರವು ಕೊಡಿಸುವ ಆಶ್ವಾಸನೆ ನೀಡಿದೆನು.
— Murugesh R Nirani (MRN) (@NiraniMurugesh) September 10, 2021
ಯೋಧನ ಕುಟುಂಬಕ್ಕೆ ಕೇಂದ್ರದಿಂದ ಬರಬೇಕಾದ ಅಗತ್ಯ ನೆರವನ್ನು ಬಿಡುಗಡೆ ಮಾಡಿಕೊಡಿಸುವುದಾಗಿಯೂ ಹೇಳಿದರು.
ಭಾರತೀಯ ಸೇನೆಯ ಮರಾಠಾ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಚಿದಾನಂದ ಚನ್ನಬಸಪ್ಪ ಶಿರಸ್ತೇದಾರ ಅವರಿಗೆ ಹಾವು ಕಚ್ಚಿ ಸಾವನ್ನಪ್ಪಿದರು. ಸಂಜೆ ಸ್ವಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳಗಿತ್ತು.