ಬೆಂಗಳೂರು:
ಜಿಲ್ಲಾವಾರು ಸಮಿತಿಗಳ ರಚನೆ ಹಾಗೂ ಪಕ್ಷದ ಸಂಘಟನೆಯಲ್ಲಿ ರಚನಾತ್ಮಕವಾಗಿ ಬಿಜೆಪಿ ಹಿರಿಯ ನಾಗರೀಕರ ಪ್ರಕೋಷ್ಠವು ಕಾರ್ಯ ನಿರ್ವಹಿಸಬೇಕೆಂದು ಹಿರಿಯ ನಾಗರೀಕರ ಪ್ರಕೋಷ್ಠದ ಸಂಚಾಲಕರು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಶ್ರೀ ಪ್ರತಾಪಸಿಂಹ ನಾಯಕ್ ಅವರು ತಿಳಿಸಿದರು.
ಪ್ರಕೋಷ್ಠದ ಜಿಲ್ಲಾವಾರು ಸಂಘಟನಾ ಸಭೆಯಲ್ಲಿ ಬೆಂಗಳೂರು ನಗರದ ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾರ್ಗದರ್ಶನ ನೀಡಿದರು. ಸಹ ಸಂಚಾಲಕರಾದ ಶ್ರೀ ಸದಾಶಿವಯ್ಯ ಅವರು ಭಾಗವಹಿಸಿ ಪ್ರಕೋಷ್ಠದ ಕುರಿತು ಮಾತನಾಡಿದರು.
ಪ್ರಕೋಷ್ಠದ ಭವಿಷ್ಯದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ನಾರಾಯಣ್ ಅವರು ಭಾಗವಹಿಸಿದ್ದರು.