Home ಬೆಂಗಳೂರು ನಗರ ರಾಷ್ಟ್ರಪತಿಗಳಿಗೆ ರಾಮಾಯಣ ದರ್ಶನಂ ಮತ್ತು ಪರ್ವ ಕಾದಂಬರಿ ಕೊಡುಗೆ ನೀಡಿದ ಸಚಿವ ಸುನಿಲ್ ಕುಮಾರ್

ರಾಷ್ಟ್ರಪತಿಗಳಿಗೆ ರಾಮಾಯಣ ದರ್ಶನಂ ಮತ್ತು ಪರ್ವ ಕಾದಂಬರಿ ಕೊಡುಗೆ ನೀಡಿದ ಸಚಿವ ಸುನಿಲ್ ಕುಮಾರ್

13
0
Karnataka presents Ramayana Darshanam to president
Advertisement
bengaluru

ಬೆಂಗಳೂರು:

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಬೆಂಗಳೂರಿನ ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎಂದು ಹೇಳಲಾಗಿದೆ.

Karnataka presents Ramayana Darshanam to president

ರಾಷ್ಟ್ರಪತಿ ಅವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯಪಾಲರು ಸೌಹಾರ್ದಯುತವಾಗಿ ಆಯೋಜಿಸಿದ್ದ ಚಹಾಕೂಟದ ಸಂದರ್ಭದಲ್ಲಿ ಭೇಟಿ ನಡೆದಿದೆ. ಈ ಸಂದರ್ಭದಲ್ಲಿ ಶ್ರೀ ಸುನಿಲ್ ಕುಮಾರ್ ಅವರು ಕುವೆಂಪು ಅವರ” ಶ್ರೀ ರಾಮಾಯಣ ದರ್ಶನಂ” ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್ಎಲ್ ಭೈರಪ್ಪ ಅವರ ,”ಪರ್ವ” ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು. ಈ ಎರಡು ಕೃತಿಗಳ ವಿಶೇಷತೆ ಮತ್ತು ಕೃತಿಕಾರರ ಕುರಿತು ಸಚಿವರು ಹೆಚ್ಚಿನ ಪರಿಚಯ ನೀಡಿದರು.


bengaluru

LEAVE A REPLY

Please enter your comment!
Please enter your name here