Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ
  • ಆರೋಗ್ಯ
  • ಬೆಂಗಳೂರು ನಗರ

ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ

The Bengaluru Live May 16, 2021 8:00 PM 1 minute read
ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ

ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಕೇಂದ್ರದಿಂದ ರಾಜ್ಯಗಳಿಗೆ ನಿಷ್ಪಕ್ಷಪಾತವಾಗಿ ಕೊವಿಡ್ ಸಂಪನ್ಮೂಲ ಹಂಚಿಕೆ

ಸಹಜ ಸ್ಥಿತಿಯತ್ತ ಕೋವಿಡ್ ಔಷಧಗಳ ಸರಬರಾಜು

ಬೆಂಗಳೂರಿನಲ್ಲಿ ಕೋವಿಡ್ ಕೇಂದ್ರಗಳಿಗೆ ಸಚಿವರ ಭೇಟಿ

ಬೆಂಗಳೂರು:

ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಒದಗಿಸಲಾಗಿದೆ.

ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ ವಾರ ಅತಿಹೆಚ್ಚು ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ ಕೇಂದ್ರವು ಒಟ್ಟು 76 ಲಕ್ಷ ವಯಲ್ಸ್ ಹಂಚಿಕೆ ಮಾಡಿದ್ದು ರಾಜ್ಯಕ್ಕೆ 10 ಲಕ್ಷ ವಯಲ್ಸ್ ಲಭ್ಯವಾಗಿದೆ ಎಂದರು.

ಉಳಿದಂತೆ, ಈ ವಾರದ ಬಳಕೆಗಾಗಿ ಮಹಾರಾಷ್ಟ್ರಕ್ಕೆ 3.35 ಲಕ್ಷ, ತಮಿಳುನಾಡಿಗೆ 1.45 ಲಕ್ಷ, ಆಂಧ್ರ ಪ್ರದೇಶಕ್ಕೆ 1.4 ಲಕ್ಷ, ಉತ್ತರಪ್ರದೇಶಕ್ಕೆ 1.3 ಲಕ್ಷ, ರಾಜಸ್ಥಾನಕ್ಕೆ 1.28 ಲಕ್ಷ ಹಾಗೂ ಗುಜರಾತಿಗೆ 91 ಸಾವಿರ ರೆಮ್ಡೆಸಿವಿರ್ ವಯಲ್ಸ್ ಹಂಚಲಾಗಿದೆ. ಉಳಿದ ರಾಜ್ಯಗಳಿಗೂ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಆಧರಿಸಿಯೇ ಈ ಔಷಧದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದು ಫಾರ್ಮಾ ಸಚಿವರೂ ಆಗಿರುವ ಸದಾನಂದ ಗೌಡ ತಿಳಿಸಿದರು.

ಮಾನ್ಯ @narendramodi ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಿದ್ದು ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ 76 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಲಾಗಿದ್ದು ರಾಜ್ಯದ ಪಾಲು 10 ಲಕ್ಷ. pic.twitter.com/vTzjQgrqKQ

— Sadananda Gowda (@DVSadanandGowda) May 16, 2021

ವಿದೇಶಗಳಿಂದಲೂ ನೆರವಿನ ರೂಪದಲ್ಲಿ ಔಷಧ, ಆಮ್ಲಜನಕ ಸಿಲಿಂಡರ್, ವಂಟಿಲೇಟರ್ ಮುಂತಾದ ವಸ್ತುಗಳು ಭಾರತಕ್ಕೆ ಹರಿದುಬರುತ್ತಿದ್ದು ಈ ಪೈಕಿ ಹೊಸದಾಗಿ 40,000 ವಯಲ್ಸ್ ರೆಮ್ಡೆಸಿವಿರ್ ಬಂದಿದೆ. ರೆಮ್ಟೆಸಿವಿರ್ ಚುಚ್ಚುಮದ್ದೇ ಇರಲಿ ಅಥವಾ ಪ್ರಾಣವಾಯು ಆಮ್ಲಜನಕವೇ ಇರಲಿ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಲಭ್ಯವಿರುವ ಕೋವಿಡ್ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಅತ್ಯಂತ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ವಿತರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಮತ್ತು ಕೊಡಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ನೀಡಿಕೆ ಮತ್ತು ಸೋಂಕು ಪರೀಕ್ಷೆ ಕಾರ್ಯದ ಪ್ರಗತಿ ಪರಿಶೀಲಿಸಿದೆ. 'ಬಯಾಪ' ಅಧ್ಯಕ್ಷ ಶ್ರೀ ಎ. ರವಿ, ಜಿಲ್ಲಾಧ್ಯಕ್ಷ ಶ್ರೀ ಬಿ. ನಾರಾಯಣ, ಪಧಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. pic.twitter.com/ylIaK6K88F

— Sadananda Gowda (@DVSadanandGowda) May 16, 2021

ರೆಮ್ಡೆಸಿವಿರ್ ಸೇರಿದಂತೆ ಕೆಲವೊಂದು ಮಾತ್ರೆಗಳು ಕೊರೊನಾ ಬಂದವರೆಲ್ಲ ತೆಗೆದುಕೊಳ್ಳುವಂತಹುದಲ್ಲ. ಯಾರಿಗೆ ಅಗತ್ಯವಿದೆ ಎಂಬುದುನ್ನು ವೈದ್ಯರು ನಿರ್ಧರಿಸುತ್ತಾರೆ ಮತ್ತು ಅಗತ್ಯವಾದ ಪ್ರಮಾಣದಲ್ಲಿ ಅದು ದೇಶದಲ್ಲಿ ಲಭ್ಯವಿದೆ. ಬಹುತೇಕ ಸೋಂಕಿತರಿಗೆ ಅದರ ಅಗತ್ಯವೇ ಬೀಳುವುದಿಲ್ಲ. ಮನೆಯಲ್ಲಿ ಸಂಗ್ರಹಿಸುವ ಮದ್ದೂ ಅದಲ್ಲ. ಹಾಗಾಗಿ ಜನರು ಮುಂದೆ ಬೇಕಾಗಬಹುದು ಎಂಬ ಹೆದರಿಕೆಯಿಂದ ಅನವಶ್ಯಕವಾಗಿ ಖರೀದಿಗೆ ಮೂಗಿಬೀಳಬಾರದು. ಇದರಿಂದ ನಿಜವಾಗಿಯೂ ಅಗತ್ಯ ಇರುವವರಿಗೆ ತೊಂದರೆಯಾಗುತ್ತದೆ. ಜನರ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕೋವಿಡ್ ಔಷಧಗಳ ಕಾಳಸಂತೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಇದನ್ನು ತಡೆಯಲು ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ಸೀಮಿತವಾಗಿ ಲಭ್ಯವಿರುವ ಔಷಧಗಳ ಅತ್ಯಂತ ನ್ಯಾಯಸಮ್ಮತ ವಿತರಣೆ ಹಾಗೂ ಬಳಕೆಯಾಗುವಂತೆ ನೋಡಿಕೊಳ್ಳಲು ಅಗತ್ಯ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಎಲ್ಲ ರಾಜ್ಯ ಸರ್ಕಾರಗಳಿಗೆ ಅತ್ಯಂತ ಕಳಕಳಿಯಿಂದ ಮನವಿ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ಕೋವಿಡ್ ಪ್ರೊಟೋಕಾಲ್ ಅಡಿಯಲ್ಲಿ ಬರುವ ಎಲ್ಲ ಔಷಧಗಳ ಸರಬರಾಜನ್ನು ಕೇಂದ್ರವು ಸತತವಾಗಿ ಗಮನಿಸುತ್ತಿದೆ ಮತ್ತು ನಿರ್ದೇಶಿಸುತ್ತಿದೆ. ಈ ಬಗ್ಗೆ ನಾವು ಸಹಾಯವಾಣಿಯನ್ನೂ (No.-1800111255. Email: monitoring-nppa@gov.in) ಸ್ಥಾಪಿಸಿದ್ದೇವೆ. ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 767 ದೂರುಗಳು ಬಂದಿದ್ದವು. ಈ ತಿಂಗಳ ಮೊದಲೆರಡು ವಾರಗಳಲ್ಲಿ 147 ದೂರುಗಳಷ್ಟೇ ಬಂದಿವೆ. ಇದು ಕೋವಿಡ್ ಪ್ರೊಟೊಕಾಲ್ ಔಷಧಗಳ ಸರಬರಾಜು ಸಹಜಸ್ಥಿತಿಗೆ ಬರುತ್ತಿರುವುದರ ಸೂಚನೆಯಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.

ಕೋವಿಡ್ ಕೇಂದ್ರಗಳಿಗೆ ಭೇಟಿ: ಸಚಿವರು ಇಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಅಮೃತಹಳ್ಳಿ, ಸಹಕಾರನಗರ ಹಾಗೂ ಕೊಡಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಲಸಿಕೆ ನೀಡಿಕೆ ಹ಻ಗೂ ಕೋವಿಡ್ ಪರೀಕ್ಷೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಹೆಬ್ಬಾಳ ಪಶುವಿಜ್ಞಾನ ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದೆ
ರಾಜ್ಯದಲ್ಲಿ #Covid ಸೋಂಕಿತರ ಆರೈಕೆಗಾಗಿ ಇಂತಹ ನೂರಾರು ತಾತ್ಕಾಲಿಕ ಶಶ್ರೂಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಸರ್ಕಾರದ ಜೊತೆ ಸಂಘಸಂಸ್ಥೆಗಳು ಪಕ್ಷದ ಕಾರ್ಯಕರ್ತರು ಕೈಜೋಡಿಸಿದ್ದಾರೆ pic.twitter.com/jqi9YczcZW

— Sadananda Gowda (@DVSadanandGowda) May 16, 2021

ಹಾಗೆಯೇ ಹೆಬ್ಬಾಳ ಪಶುವಿಜ್ಞಾನ ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ‘ಬಯಾಪ’ (BIAAPA) ಅಧ್ಯಕ್ಷ ಎ ರವಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ ನಾರಾಯಣ ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಬೌರಿಂಗ್ ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್
Next: ಕೋರಮಂಗಲದಲ್ಲಿ ತುರ್ತು 200 ಕೋವಿಡ್ ಬೆಡೆ ಸೆಂಟೆರ್ ಗೆ ರಾಮಲಿಂಗಾರೆಡ್ಡಿ ಚಾಲನೆ

Related Stories

ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

The Bengaluru Live November 21, 2026 2:34 AM
ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

The Bengaluru Live November 20, 2026 10:24 PM
ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

The Bengaluru Live November 20, 2026 9:35 PM

Latest Post

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

November 21, 2026 2:34 AM
₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಲಿ ಜಾಕೆಟ್ ಧರಿಸಿ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ, 20-11 ದಿನಾಂಕದ ಕನ್ನಡ ವೇದಿಕೆ ಬ್ಯಾನರ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ

November 21, 2026 2:28 AM
ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

November 20, 2026 10:24 PM
‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

November 20, 2026 9:35 PM
ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್ ಹಿಂದೆ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಕಚೇರಿಯಲ್ಲಿ ಇ-ಸ್ಟ್ಯಾಂಪ್ ಒಪ್ಪಂದ ಪತ್ರಗಳನ್ನು ಹಿಡಿದು ನಿಂತಿರುವ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆ ಬಲಪಡಿಸಲು ಸಹಾಸ್ ಜೊತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಪ್ಪಂದ, ಉಚಿತ ತಾಂತ್ರಿಕ ಸಲಹೆ: ಆಯುಕ್ತ ಕೆ.ಎನ್. ರಮೇಶ್

November 20, 2026 8:14 PM
ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಲಾಂಛನವಿರುವ ಗೋಡೆಯ ಮುಂದೆ ಪರಿಶೀಲನಾ ಸಭೆಯಲ್ಲಿ ಮೇಜಿನ ಬಳಿ ಕುಳಿತಿರುವ ಮೂವರು ಅಧಿಕಾರಿಗಳು
  • ಬೆಂಗಳೂರು ನಗರ

ಮಲ್ಲೇಶ್ವರ ಕ್ಷೇತ್ರದ ಪರಿಶೀಲನಾ ಸಭೆ: ಉತ್ತಮ ಮೂಲಸೌಕರ್ಯ, ಸುಗಮ ಸಂಚಾರಕ್ಕೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

November 20, 2026 8:08 PM

ನೀವು ತಪ್ಪಿಸಿಕೊಂಡಿರಬಹುದು

ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

The Bengaluru Live November 21, 2026 2:34 AM
ನೀಲಿ ಜಾಕೆಟ್ ಧರಿಸಿ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ, 20-11 ದಿನಾಂಕದ ಕನ್ನಡ ವೇದಿಕೆ ಬ್ಯಾನರ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ

The Bengaluru Live November 21, 2026 2:28 AM
ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

The Bengaluru Live November 20, 2026 10:24 PM
ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

The Bengaluru Live November 20, 2026 9:35 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ
  • ₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ
  • ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ
  • ‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ
©Copyright 2025 The Bengaluru Live All rights reserved. | MoreNews by AF themes.