Home ಬೆಂಗಳೂರು ನಗರ ಸ್ಥಿರಾಸ್ಥಿ ಮಾರ್ಗಸೂಚಿ ದರ ಪರಿಷ್ಕರಿಸಲು ಸೂಚನೆ: ಕಂದಾಯ ಸಚಿವ ಅಶೋಕ

ಸ್ಥಿರಾಸ್ಥಿ ಮಾರ್ಗಸೂಚಿ ದರ ಪರಿಷ್ಕರಿಸಲು ಸೂಚನೆ: ಕಂದಾಯ ಸಚಿವ ಅಶೋಕ

89
0
Karnataka revenue staff to work on guidance value revision: Minister
bengaluru

ಬೆಂಗಳೂರು:

“ರಾಜ್ಯದ್ಯಾಂತ ಸ್ಥಿರಾಸ್ಥಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಕುರಿತಂತೆ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ”, ಎಂದು ಕಂದಾಯ ಅಚಿವ ಆರ್ ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ,”ಕೋವಿಡ್ ನಿಂದ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಸ್ಥಿರಾಸ್ಥಿಗಳ ನೊಂದಣಿಯ ಮಾರ್ಗಸೂಚಿ ದರ ಕಡಿಮೆ ಮಾಡಬೇಕು ಎಂದು ಅನೇಕ ಸಂಘ ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಆ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಮಾರ್ಗಸೂಚಿ ದರವನ್ನ ಕಡಿಮೆ ಮಾಡುವ ಕುರಿತಂತೆ ಡಿಸೆಂಬರ್ ಒಳಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಹಾಗೆಯೇ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರೆ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿಸುವಂತೆ ಸೂಚಿಸಿದ್ದೇನೆ”, ಎಂದು ತಿಳಿಸಿದರು.

Also Read: Karnataka revenue staff to work on guidance value revision: Minister

bengaluru

“ಸರ್ವೆ ಕಾರ್ಯಗಳಿಗೆ ವೇಗ ನೀಡುವುದು ಹಾಗೂ ಬಾಕಿ ಉಳಿದಿರುವ ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ದೃಷ್ಟಿಯಿಂದ ಕಂದಾಐ ಇಲಾಖೆಯು 820 ಸರ್ವೆಯರ್‍ಗಳನ್ನ ನೇಮಕಾತಿ ಮಾಡಿಕೊಂಡಿದೆ. ಎಲ್ಲೆಲ್ಲಿ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆಯೋ ಅಲ್ಲಿಗೆ ಅವರನ್ನ ನಿಯೋಜನೆ ಮಾಡಲಾಗುವುದು. ಡಿಸೆಂಬರ್ ವೇಳೆಗೆ ಪರವಾನಗಿಯುಳ್ಳ ಇನ್ನೂ 600 ಜನರನ್ನ ನೇಮಿಸಿಕೊಳ್ಳಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಸರ್ವೆ ಕಾರ್ಯಗಳಿಗೆ ಸಹಜ ವೇಗ ಸಿಗಲಿದೆ”, ಎಂದು ಹೇಳಿದರು.

Karnataka revenue staff to work on guidance value revision: Minister

ಕಂದಾಯ ಗ್ರಾಮಗಳು : ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅವರ ಜಿಲ್ಲೆಯೊಳಗೆ ಕಂದಾಯ ಗ್ರಾಮಗಳನ್ನ ಗುರುತಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಸುಮಾರು ಕಡೆಗೆ ಕುರಬರ ಹಾಡಿ, ಬಂಜಾರ ಹಾಡಿಗಳಿವೆ. ಅವುಗಳನ್ನ ಕಂದಾಯ ಗ್ರಾಮಗಲಾಗಿ ಮಾಡಲು ಸೂಚಿಸಲಾಗಿದೆ. ಹಕ್ಕಿಪಿಕ್ಕಿ ಜನಾಂಗದವರು ವಲಸೆ ಹೋಗುವುದನ್ನ ತಪ್ಪಿಸಲು ಕಂದಾಯ ಗ್‍ರಾಮಗಳೆಂದು ಘೋಷಣೆ ಮಾಡಿ ಸೌಲಭ್ಯ ಕಲ್ಪಿಲಾಗುವುದು ಎಂದರು.

“ಬಿಬಿಎಂಪಿ ಅಧಿಕಾರಿಗಳೊಂದಿಗೆ ಬೆಂಗಳೂರಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನ ಚರ್ಚಿಸಲು ಸಧ್ಯದಲ್ಲೇ ಸಭೆ ಕರೆಯುತ್ತೇನೆ. ರಸ್ತೆಗಳ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿ ಗುಂಡಿಗಳನ್ನ ತಕ್ಷಣ ಸರಿಪಡಿಸುವಂತೆ ಸೂಚಿಸುತ್ತೇನೆ. ಮಳೆಗಾಲದಲ್ಲಿ ಸಾಕಷ್ಟು ಗುಂಡಿಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಆದಷ್ಟು ಬೇಗ ಅವುಗಳನ್ನ ಮುಚ್ಚುವಂತೆ ಸೂಚಿಸುತ್ತೇನೆ”, ಎಂದು ತಿಳಿಸಿದರು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣದ ಸಿಂಗ್ ಅವರ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಯನ್ನ ಸಚಿವ ಅಶೋಕ ತೀವ್ರ ಖಂಡಿಸಿದರು. “ಕಳೆದು ಮೂರ್ನಾಲ್ಕು ದಶಕಗಳಿಂದ ಅರುಣ್ ಸಿಂಗ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆಯಲ್ಲ. ಸೂಟ್‍ಕೇಸ್ ಸಂಸ್ಕೃತಿ ಬಿಜೆಪಿಯದ್ದಲ್ಲ, ಅದು ಜೆಡಿ ಎಸ್ ಗೆ ಹೆಚ್ಚು ಒಪ್ಪುತ್ತದೆ”, ಎಂದರು.

ಸೆಪ್ಟೆಂಬರ್ 4 ರಿಂದ 7ರ ವರೆಗೆ ರಾಜ್ಯದಲ್ಲಿ ನೆರ ಹಾವಳಿಯಿಂದ ಉಂಟಾಗಿರುವ ಹಾನಿಯನ್ನು ವೀಕ್ಷಣೆ ಮಾಡಲು ಕೇಂದ್ರದ ತಂಡ ಆಗಮಿಸಲಿದೆ ಎಂದು ಅಶೋಕ ಹೇಳಿದರು. ನಾವು ಈಗಾಗಲೇ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ, ಪ್ರಾಣಿಗಳ ಸಾವು ನೋವು, ಹಾನಿಗೊಳಗಾಗಿರುವ ಮನೆಗಳ ಕುರಿತಂತೆ ಸಮಗ್ರ ವರದಿ ನೀಡಲಾಗಿದೆ. ಈ ಹಾನಿಯ ಒಟ್ಟಾರೆ ಅಂದಾಜು ರೂ.5690.00 ಕೋಟಿಯಾಗಿದೆ. ಹಾಗೆಯೇ ನಮಗೆ ರೂ.765ಕೋಟಿಯನ್ನು ಅನುದಾನ ಎನ್ ಡಿ ಆರ್ ಎಫ್ ನಿಧಿಗೆ ಬರಬೇಕಾಗಿದ್ದು, ಅದನ್ನು ನಿರೀಕ್ಷಿಸಲಾಗುತ್ತಿದೆ”, ಎಂದು ಹೇಳಿದರು.

bengaluru

LEAVE A REPLY

Please enter your comment!
Please enter your name here