Home ಕರ್ನಾಟಕ ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕ್‌ಡೌನ್‌ ಸಡಿಲಿಕೆ ನಿರ್ಧಾರ; ಬಸವರಾಜ ಬೊಮ್ಮಾಯಿ

ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕ್‌ಡೌನ್‌ ಸಡಿಲಿಕೆ ನಿರ್ಧಾರ; ಬಸವರಾಜ ಬೊಮ್ಮಾಯಿ

66
0

ಹಾವೇರಿ:

ಜಿಲ್ಲಾ ಮಟ್ಟದಲ್ಲಿ ಇರುವ ಕೋವಿಡ್ ಸೋಂಕಿನ ವಸ್ತುಸ್ಥಿತಿಯನ್ನು ಆದರಿಸಿ ಜೂನ್ 14ರ ನಂತರ ಯಾವ ರೀತಿ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದರು

ಎಲ್ಲಿ ಪೋಸಿಟಿವಿಟಿ ರೇಟ್ ಕಡಿಮೆ ಇದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಇದೆ ? ಅಂತಹ ಜಿಲ್ಲೆಗಳಲ್ಲಿ ಸಡಿಲಿಕೆ ಕ್ರಮ ಗಳನ್ನು ಜರುಗಿಸಬೇಕು ಮಾಡಬೇಕು ಎಂಬ ಸಲಹೆ ಬಂದಿದೆ ಕೈಗಾರಿಕಾ ವಲಯ ದಿಂದಲೂ ಸಹಿತ ಹಲವು ಸಲಹೆಗಳು ಬಂದಿವೆ ಹೀಗಾಗಿ ಬೆಂಗಳೂರು ನಗರ ಸೇರಿದಂತೆ ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here