Home ಬೆಂಗಳೂರು ನಗರ ರಾಜ್ಯಾದ್ಯಂತ ವೀಕಂಡ್‌ ಕರ್ಫ್ಯೂ ರದ್ದು

ರಾಜ್ಯಾದ್ಯಂತ ವೀಕಂಡ್‌ ಕರ್ಫ್ಯೂ ರದ್ದು

284
0
Karnataka withdraws Statewide Weekend Curfew

ಬೆಂಗಳೂರು:

ರಾತ್ರಿ ಕರ್ಫ್ಯೂ ಅನ್ನು ತಕ್ಞಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿ ರಾಜ್ಯ ಸರಕಾರ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.

ಕಂದಾಯ ಸಚಿವ ಆರ್‌. ಅಶೋಕ ಅವರು ಸಭೆಯ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

Karnataka withdraws Statewide Weekend Curfew

ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಾಗೂ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಸುದೀರ್ಘವಾಗಿ ಚರ್ಚೆ ನಡೆಸಿದ ನಂತರ ವೀಕೆಂಡ್‌ ಕರ್ಫ್ಯೂ ರದ್ದು ಮಾಡಲಾಗಿದೆ. ಉಳಿದಂತೆ ರಾತ್ರಿ ಕರ್ಫ್ಯೂ ಹಾಗೂ ಇತರೆ ಕೊರೊನಾ ಕಠಿಣ ಮಾರ್ಗಸೂಚಿಗಳು ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.

ಶನಿವಾರ ಮತ್ತು ಭಾನುವಾರ ಹೋಟೆಲ್‌ಗಳಲ್ಲಿ ಸರ್ವೀಸ್‌ಗೆ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ಸೇರುತ್ತಿರುವವರ ಪ್ರಮಾಣ ಶೇಕಡ 5ಕ್ಕಿಂತ ಕಡಿಮೆ ಇದೆ. ಒಂದು ವೇಳೆ ಶೇಕಡ 5ಕ್ಕಿಂತ ಹೆಚ್ಚಾದರೆ ಮತ್ತೆ ವೀಕೆಂಡ್‌ ಕರ್ಫ್ಯೂ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಈಗಾಗಲೇ ಜಾರಿಯಲ್ಲಿರುವ 50:50 ನಿಯಮ, ಸಾರ್ವಜನಿಕ ಸಭೆ ಸಮಾರಂಭಗಳಿಗೆ, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಸೀಮಿತ ಸಂಖ್ಯೆಯ ಅತಿಥಿಗಳಿಗೆ ಕಲ್ಪಿಸಲಾಗಿದೆ. ಎಲ್ಲ ಕಠಿಣ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ.

Also Read: Amid citizen pressure, Karnataka withdraws weekend curfew

ಬೆಂಗಳೂರಿನಲ್ಲಿ ಜನವರಿ 29ರವರೆಗೆ ಶಾಲಾ-ಕಾಲೇಜು ಬಂದ್

ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಬೆಂಗಳೂರಿನಲ್ಲಿ ಇದೇ 29 ರವರೆಗೆ ಶಾಲಾ-ಕಾಲೇಜು ಬಂದ್ ಮಾಡಲು ನಿರ್ಧರಿಸಲಾಗಿದೆ, “ಈಗಿರುವಂತೆ 10-12 ರವರೆಗಿನ ತರಗತಿಗಳಿಗೆ ಭೌತಿಕ ತರಗತಿ. ಉಳಿದ ಜಿಲ್ಲೆಗಳಲ್ಲಿ ಶಾಲೆ- ಕಾಲೇಜು ತೆರೆಯುವ, ಮುಚ್ಚುವ ತೀರ್ಮಾನ ಜಿಲ್ಲಾಡಳಿದ ವಿವೇಚನೆಗೆ ನೀಡಲಾಗಿದೆ,” ಎಂದು ಹೇಳಿದರು.

ಕಡಿಮೆ ಪ್ರಕರಣಗಳಿದ್ದರೆ 3 ದಿನ, ಹೆಚ್ಚು ಪ್ರಕರಣಗಳಿದ್ದರೆ 7 ದಿನ ಶಾಲೆ-ಕಾಲೇಜು ಬಂದ್ ಮಾಡಬಹುದು. ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ ವಿನಃ ಜಿಲ್ಲೆ, ನಗರಕ್ಕೆ ಈ ನಿಯಮ ಅನ್ವಯವಾಗದು ಎಂದು ಸಚಿವ ನಾಗೇಶ್ ಹೇಳಿದರು.

ದಿನಾಂಕ 21-1-2022 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿ ಗತಿ ಕುರಿತು ನಡೆಸಿದ ಪರಿಶೀಲನಾ ಸಭೆಯ ಮುಖ್ಯಾಂಶಗಳು:

  1. ಜನವರಿ 20ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 2,93,231 ಸಕ್ರಿಯ ಪ್ರಕರಣಗಳು ಇವೆ. ಇದರಲ್ಲಿ 2.86 ಲಕ್ಷ ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ
  2. ಒಟ್ಟು 5344 ಸೊಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 340 ಜನ ಐಸಿಯು ನಲ್ಲಿ ಇದ್ದಾರೆ. 127 ಮಂದಿ ವೆಂಟಿಲೇಟರ್ ನಲ್ಲಿ ಇದ್ದಾರೆ.
  3. ಬೆಂಗಳೂರನ್ನು ಹೊರತು ಪಡಿಸಿ ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ.
  4. ಪಾಸಿಟಿವಿ ದರ ಶೇ. 19.94 ರಷ್ಟಿದೆ.
  5. ಮಕ್ಕಳ ಪಾಸಿಟಿವಿಟಿ ದರ ಶೇ.8 ರಷ್ಟಿದ್ದು, ವಯಸ್ಕರ ಪಾಸಿಟಿವಿಟಿ ದರ ಶೇ. 16.57 ರಷ್ಟಿದೆ.
  6. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಪ್ರಮಾಣದ ಮೇಲೆ ನಿಗಾ ವಹಿಸಲಾಗುತ್ತಿದೆ.
  7. ರಾಜ್ಯದಲ್ಲಿ ಮಂಜೂರಾಗಿರುವ 243 ಪಿಎಸ್ಎ ಪ್ಲಾಂಟ್ ಗಳ ಪೈಕಿ 225 ಕಾರ್ಯಾರಂಭ ಮಾಡಿವೆ.
  8. ಎಲ್ಲ ಜಿಲ್ಲಾ ಆಸ್ಪತ್ರೆಗಳು, 113 ತಾಲ್ಲೂಕು ಆಸ್ಪತ್ರೆಗಳಲ್ಲಿ ಪಿಎಸ್ ಎ ಪ್ಲಾಂಟ್ ಗಳು ಕಾರ್ಯಾರಂಭಮಾಡಿವೆ.
  9. ಸರಾಸರಿ ಮೂರು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ 2.6 ಜನರಿಗೆ ಹರಡುತ್ತಿದೆ.
  10. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುತ್ತಿದೆ.
  11. ಬೆಂಗಳೂರಿನ ಜೊತೆಗೆ ಇತರ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
  12. ವಾರಾಂತ್ಯ ಕರ್ಫ್ಯೂ ವಿಧಿಸಿದರು ಕೂಡ ದೊಡ್ಡ ಪರಿಣಾಮ ಉಂಟಾಗಿಲ್ಲ. ಸೊಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಹೆಚ್ಚಾದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 5 ರಿಂದ 6ರ ಮದ್ಯದಲ್ಲಿದೆ. ಚೇತರಿಸಿಕೊಳ್ಳುತ್ತಿರುವ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
  13. ಆದರೆ ಮುಂದಿನ ವಾರದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ (peak) ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  14. ಜೊತೆಗೆ ಕೋವಿಡ್ 19 ನಿರ್ವಹಣೆಯ ಮುಂಚೂಣಿಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಗಮನಿಸಲಾಯಿತು.
  15. ಜನರ ಜೀವ ಮತ್ತು ಜೀವನ ನಿರ್ವಹಣೆ ಎರಡೂ ಸರಿದೂಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
  16. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು
  17. ರಾತ್ರಿ ಕರ್ಫ್ಯೂ ಅವಧಿ ವಾರದ ಏಳೂ ದಿನಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.
  18. ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನು ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂ ವನ್ನು ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಲಾಯಿತು. ಆದರೆ ಮುಂದಿನವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.
  19. ಆದ್ದರಿಂದ ಸಾರ್ವಜನಿಕಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ.
  20. ಮಾಲ್, ಹೋಟೆಲ್, ಬಾರ್, ಕ್ಲಬ್,ಪಬ್ ಗಳು ಶೇ. 50 ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಯಿತು. ಎರಡೂ ಲಸಿಕೆ ಪಡೆಯುವುದು ಕಡ್ಡಾಯ.

LEAVE A REPLY

Please enter your comment!
Please enter your name here