Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ತುಂಗಭದ್ರಾ ಅಣೆಕಟ್ಟು ಕ್ರಸ್ಟ್ಗೇಟ್ ವಿಚಾರ; ಪ್ರತಿಪಕ್ಷದವರ ಟೀಕೆಗಳು ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ.ಶಿವಕುಮಾರ್
  • ಕೊಪ್ಪಳ
  • ಕರ್ನಾಟಕ
  • ಬೆಂಗಳೂರು ನಗರ

ತುಂಗಭದ್ರಾ ಅಣೆಕಟ್ಟು ಕ್ರಸ್ಟ್ಗೇಟ್ ವಿಚಾರ; ಪ್ರತಿಪಕ್ಷದವರ ಟೀಕೆಗಳು ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ.ಶಿವಕುಮಾರ್

The Bengaluru Live August 21, 2024 2:45 PM 1 minute read
Tungabhadra Dam Crustgate Issue; Opposition's criticism dies down, work survives: DCM DK Shivakumar

ತುಂಗಭದ್ರಾ ಅಣೆಕಟ್ಟು ಕ್ರಸ್ಟ್ಗೇಟ್ ವಿಚಾರ; ಪ್ರತಿಪಕ್ಷದವರ ಟೀಕೆಗಳು ಸತ್ತು ಹೋದವು, ಕೆಲಸ ಉಳಿದುಕೊಂಡಿತು: ಡಿಸಿಎಂ ಡಿ.ಕೆ.ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು/ಕೊಪ್ಪಳ, ಆ. 21: “ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್ ಅವಘಡ ವಿಚಾರವಾಗಿ ವಿರೊಧ ಪಕ್ಷಗಳು ಕೇವಲ ಟೀಕೆ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ನಮ್ಮ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಸದಾಶಿವ ನಗರದ ನಿವಾಸ ಹಾಗೂ ತದ ನಂತರ ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು “ನಮ್ಮ ತಂತ್ರಜ್ಞರು, ಅಧಿಕಾರಿಗಳು, ಇಂಜಿನಿಯರ್ ಗಳು, ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಅವಘಡ ನಡೆದ ದಿನದಿಂದ ಒಂದು ರಾತ್ರಿಯೂ ನಿದ್ದೆ ಮಾಡದೆ ಕೆಲಸ ಮಾಡಿದ್ದಾರೆ. ದೇವರ, ಜನರ ಆಶೀರ್ವಾದದಿಂದ ಈ ಕೆಲಸ ನಡೆದಿದೆ. ನಮ್ಮ ರೈತರನ್ನು ನಾವು ಬದುಕಿಸಿದ್ದೇವೆ” ಎಂದರು.

ನವಲಿ ಅಣೆಕಟ್ಟಿನ ಬಗ್ಗೆ ಸರ್ಕಾರದ ಆಲೋಚನೆ: ತುಂಗಭದ್ರಾ ಅಣೆಕಟ್ಟಿನ ಆಯಸ್ಸು ಕಡಿಮೆಯಿದೆ ಎನ್ನುವ ಬಗ್ಗೆ ಕೇಳಿದಾಗ “ಯಾವ ಆಯಸ್ಸು ಕಡಿಮೆಯಿಲ್ಲ. ತುಂಗಭದ್ರಾ ಅಣೆಕಟ್ಟು ಕಟ್ಟುವಾಗಲೇ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬಿಕೊಳ್ಳುತ್ತದೆ ಎನ್ನುವ ವರದಿಯಿತ್ತು ಎಂದು ಎಂ.ಬಿ.ಪಾಟೀಲರು ಮೊದಲೇ ಹೇಳಿದ್ದರು. ಮುಂದಿನ ದಿನಗಳಲ್ಲಿ ಪ್ರವಾಸ ನಡೆಸಿ ನವಲಿ ಸಮತೋಲಿತ ಅಣೆಕಟ್ಟಿನ ವಿಚಾರವಾಗಿ ಕೆಲಸ ಮಾಡಲಾಗುವುದು. ಇದರ ಪ್ರಸ್ತಾಪವನ್ನು ಈಗಾಗಲೇ ಬಜೆಟ್ ಅಲ್ಲಿ ಸೇರಿಸಲಾಗಿದೆ” ಎಂದು ತಿಳಿಸಿದರು.

ಕ್ರಸ್ಟ್ ಗೇಟ್ ಗಳನ್ನು 45 ವರ್ಷಗಳಿಗೊಮ್ಮೆ ಬದಲಾಯಿಸಬೇಕು ಎನ್ನುವ ವರದಿಯಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದಾಗ “ನಾನು ತಂತ್ರಜ್ಞನಲ್ಲ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಎಂದು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ. ಅವರು ಎಲ್ಲಾ ಅಣೆಕಟ್ಟುಗಳ ಸುರಕ್ಷಾತ ವರದಿಯನ್ನು ನೀಡಲಿದ್ದಾರೆ. ಅವರ ವರದಿಯ ಮೇಲೆ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಕೆಲಸಗಳನ್ನು ಸರ್ಕಾರ ಮಾಡಲಿದೆ”ಎಂದು ತಿಳಿಸಿದರು.

ತುಂಗಭದ್ರಾ ತುಂಬಿದ ತಕ್ಷಣ ಬಾಗಿನ ಅರ್ಪಣೆ: “ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತೇವೆ. ಕೊಪ್ಪಳಕ್ಕೆ ವಿಮಾನ ಮಾರ್ಗದಲ್ಲಿ ಬರುವಾಗ ವೀಕ್ಷಣೆ ಮಾಡಿದೆವು. ಅಣೆಕಟ್ಟು ಶೀಘ್ರ ತುಂಬಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಾರಾಯಣ ಎಂಜಿನಿಯರಿಂಗ್, ಜಿಂದಾಲ್ ಮತ್ತು ಹಿಂದೂಸ್ಥಾನ್ ಇಂಜಿನಿಯರಿಂಗ್ ಈ ಮೂರು ಕಂಪೆನಿಗಳು ಮಾಡಿದ ಸಹಾಯದಿಂದ ಕೇವಲ ನಾಲ್ಕು ದಿನಗಳಲ್ಲಿ ಗೇಟ್ ದುರಸ್ತಿ ಮಾಡಲಾಯಿತು. ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ. ಇಡೀ ದೇಶವೇ ಏನಾಗಬಹುದು ಎಂದು ಈ ಕೆಲಸವನ್ನು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ” ಎಂದು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಬಂದರೆ ಮುಲಾಜಿಲ್ಲದೆ ಬಂದಿಸ್ತೀವಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Next: ದಾಖಲೆಯಲ್ಲಿ ನನ್ನ ಸಹಿ ಪೋರ್ಜರಿ ಮಾಡಲಾಗಿದೆ; ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Related Stories

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM

Latest Post

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ ‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

November 29, 2026 9:07 PM
ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

November 29, 2026 8:56 PM
ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

November 29, 2026 7:53 PM
850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್ ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

November 29, 2026 7:46 PM
‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

November 29, 2026 7:27 PM
₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

November 29, 2026 7:11 PM

ನೀವು ತಪ್ಪಿಸಿಕೊಂಡಿರಬಹುದು

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ
  • ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ
  • ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ
  • 850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್
©Copyright 2025 The Bengaluru Live All rights reserved. | MoreNews by AF themes.