Home Uncategorized Karthyayani Amma: 96ನೇ ವಯಸ್ಸಲ್ಲಿ ಸಾಕ್ಷರತಾ ಪರೀಕ್ಷೆ ಪಾಸಾಗಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ..!

Karthyayani Amma: 96ನೇ ವಯಸ್ಸಲ್ಲಿ ಸಾಕ್ಷರತಾ ಪರೀಕ್ಷೆ ಪಾಸಾಗಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ..!

19
0

ಆಲಪ್ಪುಳದೇಶದ ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ ಕೇರಳದ ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ. ಅವರಿಗೆ 101 ವಯಸ್ಸಾಗಿತ್ತು. ಆಲಪ್ಪುಳ ಜಿಲ್ಲೆಯ ಹರಿಪಾಡ್ ಮುತ್ತುಲ್ಲದ ಸ್ವಗೃಹದಲ್ಲಿ ನಿಧನರಾದರು.  ಕೇರಳ ಸರ್ಕಾರದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಟಾಪರ್ ಆಗಿದ್ದರು. 40,000 ಮಂದಿ ಈ ಪರೀಕ್ಷೆ ಬರೆದಿದ್ದು, ಇದರಲ್ಲಿ ಕಾರ್ತ್ಯಾಯಿನಿ ಅವರು 98 ಪರ್ಸೆಂಟ್ ಮಾರ್ಕ್ಸ್‌ ಪಡೆದಿದ್ದರು. 2018ರಲ್ಲಿ, ನಾರಿಶಕ್ತಿ ಪ್ರಶಸ್ತಿಯನ್ನು ಗೆದ್ದರು. ಕಳೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಿಶಕ್ತಿ ಪ್ರಶಸ್ತಿ ವಿಜೇತೆ ಕಾರ್ತ್ಯಾಯಿನಿ ಅಮ್ಮನವರ ಸ್ತಬ್ಧಚಿತ್ರ ಸಹ ಸೇರಿತ್ತು.

ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನೀನ್ಯಾರು?: ಪ್ರತಾಪ್ ಸಿಂಹ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ಮನೆಯಲ್ಲಿರೋ ಆರ್ಥಿಕ ಸಮಸ್ಯೆಯಿಂದಾಗಿ ಕಾರ್ತ್ಯಾಯಿನಿ, ಚಿಕ್ಕಂದಿನಲ್ಲೇ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದರು. ಗಂಡನ ಸಾವಿನ ನಂತರ ಕಸಗುಡಿಸುವ ಕೆಲಸ ಮಾಡಿ  ತಮ್ಮ ಆರು ಮಕ್ಕಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಬಡತನವಿದ್ದರೂ ಕಷ್ಟಪಟ್ಟು ಎಲ್ಲರನ್ನೂ ಬೆಳೆಸಿದ್ದರು. ತಮ್ಮ 96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಎಲ್ಲರಿಗೂ ಮಾದರಿ ಅನಿಸಿಕೊಂಡರು. 2020ರಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಾರಿಶಕ್ತಿ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರು.

The post Karthyayani Amma: 96ನೇ ವಯಸ್ಸಲ್ಲಿ ಸಾಕ್ಷರತಾ ಪರೀಕ್ಷೆ ಪಾಸಾಗಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ..! appeared first on Ain Live News.

LEAVE A REPLY

Please enter your comment!
Please enter your name here