ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ತಡೆಯಲಿ IT BTಯ ಪ್ರಮುಖ ಕಂಪನಿಗಳು ಮಾಡಿದ್ದೇನು ಗೊತ್ತಾ?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾದ್ದು ಹೀಗಾಗಿ ಅನೇಕ ಮಂದಿ ಮೆಟ್ರೋ ಮೊರೆ ಹೋಗುತ್ತಿದ್ದಾರೆ ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐಟಿ ಬಿಟಿ ಕಂಪನಿಗಳು ಕೂಡ ಮುಂದಾಗಿವೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್: ಪರೋಕ್ಷವಾಗಿ ಶೆಡ್ಡಿಂಗ್ ಬಗ್ಗೆ ಸತ್ಯ ಒಪ್ಪಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್!
ಬೆಂಗಳೂರಿನ ಹೊರ ವರ್ತುಲ ರಸ್ತೆ ಉದ್ದಕ್ಕೂ ಇರುವ ಹಲವಾರು ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ಉತ್ತೇಜಿಸಲು ದಿಟ್ಟ ಹೆಜ್ಜೆ ಇಟ್ಟಿದ್ದು ಈ ಪ್ರಯತ್ನದಲ್ಲಿ ನಾಗರಿಕ ಕಾರ್ಯಕರ್ತರು ಮತ್ತು ಇತರ ಮಧ್ಯಸ್ಥಗಾರರ ಜೊತೆ ಕೈ ಜೋಡಿಸಿವೆ.
ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ ಮುಂದೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ರು. ಈ ವೇಳೆ ಅನೇಕ ಕಂಪನಿಯ ಮುಖಂಡರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಇನ್ಮುಂದೆ ಐಟಿ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಬಳಕೆ ಮಾಡಲಿದ್ದಾರೆ ಕನಿಷ್ಟ ಎರಡು ದಿನ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸ್ತೇವೆ ಅಂತ ಐಟಿ ಕಂಪನಿಗಳ ಸಿಇಓ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮುಂದೆ ಇಂದು ಇಕೋ ಸ್ಪೇಸ್ ನಲ್ಲಿ ಐಟಿ ಉದ್ಯೋಗಿಗಳು ಪ್ರತಿಜ್ಞೆ ಮಾಡಿ ಸಹಿ ಹಾಕಿದ್ರು
The post ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ತಡೆಯಲಿ IT BTಯ ಪ್ರಮುಖ ಕಂಪನಿಗಳು ಮಾಡಿದ್ದೇನು ಗೊತ್ತಾ? appeared first on Ain Live News.