ಶ್ರೀರಂಗಪಟ್ಟಣ ದಸರಾ: ಕೆಆರ್ಎಸ್ ಬೃಂದಾವನದಲ್ಲಿ ಅಕ್ಟೋಬರ್ 16–21 ಕಾವೇರಿ ಆರತಿ
ಮಂಡ್ಯ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್ಎಸ್ ಬೃಂದಾವನದಲ್ಲಿ ಅಕ್ಟೋಬರ್ 16ರಿಂದ 21ರವರೆಗೆ ಕಾವೇರಿ ಆರತಿ ನಡೆಯಲಿದೆ ಎಂದು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.
ಆರು ದಿನಗಳ ಕಾರ್ಯಕ್ರಮಕ್ಕೆ ನಾಡಿನ ಜನತೆ, ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಇಲಾಖೆ ಆಹ್ವಾನಿಸಿದೆ. ಕಾವೇರಿ ತಾಯಿಗೆ ಭಕ್ತಿಯ ನಮನ ಹಾಗೂ ನಾಡಿನ ಸಂಸ್ಕೃತಿಗೆ ಗೌರವದ ಸಮರ್ಪಣೆ ಎಂದು ಕಾರ್ಯಕ್ರಮವನ್ನು ವಿವರಿಸಿದೆ.
ಈ ಹಿಂದೆ ಅಕ್ಟೋಬರ್ 11ರಿಂದ 16ರವರೆಗೆ ನಿಗದಿಯಾಗಿದ್ದ ಕಾವೇರಿ ಆರತಿ ಇದೀಗ ಅಕ್ಟೋಬರ್ 16ರಿಂದ 21ರವರೆಗೆ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಪ್ರತಿದಿನ ಇರಲಿವೆ.
