ಬೆಂಗಳೂರು:
ಕೆಲ ವಿತರಕರ ಷಡ್ಯಂತ್ರದಿಂದಾಗಿ ಇಂದು ‘ಕೋಟಿಗೊಬ್ಬ’ ಬಿಡುಗಡೆಯಾಗಲಿಲ್ಲ. ಆದರೆ ನಾಳೆಯಿಂದ ಚಿತ್ರ ಖಂಡಿತವಾಗಿಯೂ ಭರ್ಜರಿ ಪ್ರದರ್ಶನ ಕಾಣಲಿದೆ ಎಂದು ನಟ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದ್ದರೆ.
Thank you all friends for ua support and love.
— Kichcha Sudeepa (@KicchaSudeep) October 14, 2021
🤗❤ pic.twitter.com/Ri7Vhpwl3Q
ಸೂರಪ್ಪಬಾಬು ಅವರು ಕ್ಷಮೆ ಯಾಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸುದೀಪ್, ಈ ಬಗೆಯ ಅಡಚಣೆಗೆ ಯಾರು ಕಾರಣ ಎಂಬುದು ಗೊತ್ತಾಗಿದೆ. ಕಾಲವೇ ಅವರಿಗೆ ಪಾಠ ಕಲಿಸಲಿದೆ. ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಿಲೀಸ್ ಆಗದಂತೆ ಷಡ್ಯಂತ್ರ: ಸೂರಪ್ಪಬಾಬು
ಕೋಟಿಗೊಬ್ಬ ಚಿತ್ರ ವೀಕ್ಷಿಸಲು ಬಹುದಿನಗಳಿಂದ ಕಾದು ಕುಳಿತಿದ್ದ ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದ್ದು, ಈ ಸಂಬಂಧ ನಿರ್ಮಾಪಕ ಸೂರಪ್ಪ ಬಾಬು ಕ್ಷಮೆ ಯಾಚಿಸಿದ್ದಾರೆ.
ಕೋಟಿಗೊಬ್ಬ ರಿಲೀಸ್ ಆಗದಂತೆ ಕೆಲ ವಿತರಕರು ಷಡ್ಯಂತ್ರ ರೂಪಿಸಿದ ಕಾರಣ ನಿಗದಿಯಂತೆ ಇಂದು ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಖಂಡಿತ ಕೋಟಿಗೊಬ್ಬ ಬಿಡುಗಡೆಯಾಗಲಿದೆ ಎಂದಿದ್ದಾರೆ.