Home ಮೈಸೂರು ಆದಿಚುಂಚನಗಿರಿ ಜಗದ್ಗುರುಗಳ ಸಮ್ಮುಖದಲ್ಲಿ 12 ಮಂದಿ ಸಾಧಕರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ

ಆದಿಚುಂಚನಗಿರಿ ಜಗದ್ಗುರುಗಳ ಸಮ್ಮುಖದಲ್ಲಿ 12 ಮಂದಿ ಸಾಧಕರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ

135
0
12 Achievers awarded with Sri Nalwadi Krishnaraja Wodeyar Award in Mysuru

ನಾಲ್ವಡಿಯವರ ಜನ್ಮದಿನದಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಿಸಿದ್ದ ಪ್ರಶಸ್ತಿ.

ಮೈಸೂರು:

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಶ್ರೀ ನಾಲ್ವಡಿಯವರ ಸ್ಮರಣೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ನೀಡುವುದಾಗಿ ಘೋಷಿಸಿದ್ದ ಪ್ರಶಸ್ತಿಯನ್ನು ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಯವರ ಸಮ್ಮುಖದಲ್ಲಿ ಬುಧವಾರ ಅರಮನೆ ವೇದಿಕೆಯಲ್ಲಿ 12ಮಂದಿ ಸಾಧಕರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

12 Achievers awarded with Sri Nalwadi Krishnaraja Wodeyar Award in Mysuru

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಆಧುನಿಕತೆಯ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಅವರು ಎಲ್ಲಾ ಕ್ಷೇತ್ರದ ಬೆಳವಣಿಗೆಗೂ ಅದ್ಯತೆ ನೀಡಿದರು ಎಂದು ಶ್ರೀಗಳು ಹೇಳಿದರು.

ಸ್ವಾಮಿ ವಿವೇಕಾನಂದರು ಟಾಟಾ ಅವರಿಗೆ ಆಧ್ಯಾತ್ಮದ ಜೊತೆಗೆ ವಿಜ್ಣಾನ, ತಂತ್ರಜ್ಞಾನ ‌ಮತ್ತು ಕೈಗಾರೀಕರಣ ಬೆಳೆಸಲು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರ‌ ಮಾತುಗಳಿಂದ‌ ಸ್ಪೂರ್ತಿಗೊಂಡ ಟಾಟಾ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 450 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ ಫಲವಾಗಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಾಯಿತು ಎಂದು ಹೇಳಿದರು.

12 Achievers awarded with Sri Nalwadi Krishnaraja Wodeyar Award in Mysuru

ನಾಲ್ವಡಿಯವರು ಸ್ವದೇಶಿ ಮತ್ತು ಪಾಶ್ಚಾತ್ಯ ದೃಷ್ಟಿಕೋನವನ್ನು ಸಮ್ಮಿಳನ ಮಾಡಿಕೊಂಡು ಮೈಸೂರನ್ನು ಕಟ್ಟಿದ ರೀತಿಯೇ ಅದ್ಭುತ ಎಂದು ಬಣ್ಣಿಸಿದರು.

ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿರು. ಮೈಸೂರು ವಿಶ್ವವಿದ್ಯಾಲಯ, ಸಹಕಾರಿ ಬ್ಯಾಂಕ್‌ಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇನ್ನೂ ಅನೇಕ ಸಂಸ್ಥೆಗಳು ನಾಲ್ವಡಿಯವರ ಕೊಡುಗೆ ಎಂದರು.

12 Achievers awarded with Sri Nalwadi Krishnaraja Wodeyar Award in Mysuru

ಯಾವ ವ್ಯಕ್ತಿ ಜಗತ್ತಿಗೆ ಸೇವೆ ಮಾಡಬೇಕೆಂಬ ದೃಷ್ಟಿಯಿಂದ ಬದುಕುತ್ತಾರೊ ಅವರು ಸತ್ತ ಮೇಲೂ ಬದುಕುತ್ತಾರೆ. ಆದರೆ ಯಾವ ವ್ಯಕ್ತಿ ತನಗೋಸ್ಕರ ಮಾತ್ರ ಬದುಕುತ್ತಾನೊ ಅವನು ಬದುಕಿದ್ದು ಸತ್ತ ಹಾಗೆ. ಇದಕ್ಕೆ ಸಾಕ್ಷಿಯಾಗಿ ನಮ್ಮ ನಾಡಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡನ್ನು ಕಟ್ಟಿ ಆಧುನಿಕ ಮೈಸೂರನ್ನಾಗಿ ಬೆಳೆಸಿದ ಪರಿ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದು ಹೇಳಿದರು.

‘ನಾಡಿನ ಹಿರಿಮೆ ಹೆಚ್ಚಿಸಲು ಬದುಕು ಮುಡಿಪಾಗಿಟ್ಟಂತಹ ವ್ಯಕ್ತಿಗಳನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಾಲ್ವಡಿ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ನಿರ್ಧಾರ ಮಾಡಿರುವುದು ಶ್ಲಾಘನೀಯ ಎಂದರು.

12 Achievers awarded with Sri Nalwadi Krishnaraja Wodeyar Award in Mysuru

ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ಪ್ರೊ.ಕೃಷ್ಣೇಗೌಡ ಅವರು ಮಾತನಾಡಿ, ಕೃಷ್ಣರಾಜ ಭೂಪ, ಮನೆ ಮನೆಯ ದೀಪ ಎಂದೇ ಹೆಸರಾಗಿದ್ದ ಕೃಷ್ಣರಾಜ ಒಡೆಯರ್ ಅವರು ನಾಡಿಗಾಗಿ ಅತ್ಯದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಯದುವಂಶದವರು ಮೈಸೂರಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಮೈಸೂರು ಸಾಂಸ್ಕೃತಿಕವಾಗಿ ಹಾಗೂ ಭೌತಿಕವಾಗಿ ಶ್ರೀ ಕೃಷ್ಣರಾಜ ಒಡೆಯರ್ ಅವರ ಹೆಸರು ಜೀವಂತವಾಗಿರುತ್ತಾರೆ ಎಂದು ಹೇಳಿದರು.

ಎಸ್.ಟಿ.ಸೋಮಶೇಖರ್ ಅವರ ಗುಣ ಸ್ವಭಾವಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಇಂತಹ ಅಪರೂಪದ ಗುಣ ಅವರಿಗೆ ಹೇಗೆ ಬಂದಿರಬಹುದು ಎಂಬ ಆಲೋಚನೆ ಬಂದು. ಈ ನಾಡಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರ ಒಡನಾಟದಲ್ಲಿ ಬೆಳೆದವರು ಇವರು. ಹಾಗಾಗಿ ಅವರ ಗುಣ ಸ್ವಭಾವಗಳು, ಆಡಳಿತ ಕೌಶಲ್ಯಗಳು ಇವರಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತರಾದ ಜಾನಪದ ಗಾಯಕ ಜೀನಹಳ್ಳಿ ಸಿದ್ದಲಿಂಗಪ್ಪ ಅವರು ಹಾಗೂ ಅವರ ತಂಡ ಮಹದೇವ ಸ್ವಾಮಿ ಬಗ್ಗೆ ಹಾಡುವುದರ ಮೂಲಕ ಸಚಿವರನ್ನೂ ಸೇರಿದಂತೆ ಸಭಿಕರನ್ನು ಭಕ್ತಿಗಡಲ್ಲಿ ತೇಲಿಸಿದರು‌. ಈಚನೂರು ಕುಮಾರ್ ಅವರು ಅರಮನೆಯ ಇತಿಹಾಸ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆ.ಎಲ್.ಆರ್.ಅಧ್ಯಕ್ಷ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ.ಯೋಗೀಶ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here