ರಾಮನಗರ/ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಭಾನುವಾರ ರಾತ್ರಿ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದು, ಶಿವಕುಮಾರ್ ಅದನ್ನು ನಿರಾಕರಿಸಿದರು.
ಭಾನುವಾರ ರಾತ್ರಿ ಮೊದಲ ದಿನದ ಪಾದಯಾತ್ರೆ ಮುಗಿಸಿ ಡಿಕೆಶಿ ತಮ್ಮ ಊರಾದ ದೊಡ್ಡಾಲಹಳ್ಳಿಯಲ್ಲಿ ತಂಗಿದ್ದರು. ಈ ವೇಳೆ ಅಲ್ಲಿಗೆ ರಾಮನಗರ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ನೇತೃತ್ವದ ಅಧಿಕಾರಿಗಳ ತಂಡವು ಅಲ್ಲಿಗೆ ಬಂದಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿತು.
ಆದರೆ ಇದನ್ನು ನಿರಾಕರಿಸಿದ ಡಿಕೆಶಿ, ನನಗೆ ಯಾವ ರೋಗ ಲಕ್ಷಣಗಳೂ ಇಲ್ಲ. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು.
Also Read: Karnataka Congress chief DK Shivakumar angrily refuses to undergo Covid-19 test