Home ಕರ್ನಾಟಕ ಅತ್ಯಾಚಾರಿಗಳಿಗೆ ತ್ವರಿತ ಕಠಿಣ ಶಿಕ್ಷೆ ಒದಗಿಸಲು ಕಾನೂನು ತಿದ್ದುಪಡಿ ಅಗತ್ಯ: ಈಶ್ವರಪ್ಪ

ಅತ್ಯಾಚಾರಿಗಳಿಗೆ ತ್ವರಿತ ಕಠಿಣ ಶಿಕ್ಷೆ ಒದಗಿಸಲು ಕಾನೂನು ತಿದ್ದುಪಡಿ ಅಗತ್ಯ: ಈಶ್ವರಪ್ಪ

76
0
Law amendment required for quick punishment of rapists: Karnataka Minister

ಶಿವಮೊಗ್ಗ:

ಅತ್ಯಾಚಾರಿಗಳಿಗೆ ತ್ವರಿತವಾಗಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲು ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಆತಂಕ ಹುಟ್ಟಿಸುತ್ತಿದೆ. ಅತ್ಯಾಚಾರಿಗಳಿಗೆ ಸರ್ಕಾರ, ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ. ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ ಎಂದರು.

ಇದನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ. ತಾವು ವಿಧಾನ ಪರಿಷತ್‌ ಸದಸ್ಯರಾಗಿದ್ದ ಸಮಯದಲ್ಲಿ ಕಾನೂನಿಗೆ ತಿದ್ದಿಪಡಿ ತರುವಂತೆ ಆಗ್ರಹಿಸಿದ್ದೆ. ಅಂದಿನ ಗೃಹ ಸಚಿವ ಜಾರ್ಜ್‌ ಭರವಸೆ ನೀಡಿದ್ದರು. ಇಂದಿಗೂ ಹಳೆಯ ಕಾನೂನು ಜಾರಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here