ಮಂಗಳೂರು:
ಶೌಚಾಲಯದೊಳಗೆ ಚಿರತೆ ಹಾಗೂ ನಾಯಿ ಸೆರೆಯಾಗಿರುವ ಘಟನೆ ಬುಧವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ.
ರೇಗಪ್ಪ ಎಂಬುವವರ ಮನೆಯ ಶೌಚಾಲಯದಲ್ಲಿ ಚಿರತೆ, ನಾಯಿ ಬಂಧಿಯಾಗಿವೆ. ರೇಗಪ್ಪ ಅವರ ಮನೆ ನಾಯಿಯನ್ನು ಹಿಡಿಯಲು ಚಿರತೆ ಓಡಿಸಿಕೊಂಡು ಬಂದಾಗ, ನಾಯಿ ಹೆದರಿ ಓಡಿ ಶೌಚಾಲಯದೊಳಗೆ ನುಗ್ಗಿದೆ.
ಪರಿಣಾಮ ಚಿರತೆಯೂ ಒಳ ನುಗ್ಗಿದೆ. ಚಿರತೆಯನ್ನು ಕಣ್ಣಾರೆ ಕಂಡ ಮನೆ ಮಾಲೀಕರು ತಕ್ಷಣವೇ ಬಾಗಿಲು ಹಾಕಿದ್ದರಿದ ಚಿರತೆ ಮತ್ತು ನಾಯಿ ಶೌಚಾಲಯದೊಳಗಡೆ ಸೆರೆಯಾಗಿವೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಅಧಿಕಾರಿಗಳು ಅರಿವಳಿಕೆ ನೀಡಿ ಚಿರತೆಯನ್ನು ಸೆರೆಹಿಡಿಯಲು ಯೋಜನೆ ರೂಪಿಸಿದ್ದು, ಸಾರ್ವಜನಿಕರು ಚಿರತೆಯನ್ನು ಕೆರಳಿಸದಂತೆ ಸ್ಥಳೀಯರಿಗೆ ವಿನಂತಿ ಮಾಡಿದ್ದಾರೆ.