Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Load Shedding in Karnataka | ಲೋಡ್ ಶೆಡ್ಡಿಂಗ್ ಬಗ್ಗೆ ಟೀಕೆ ಮಾಡುವ ಬಿಜೆಪಿ, ತನ್ನ ಅವಧಿಯಲ್ಲಿ ಎಷ್ಟು ಪ್ರಮಾಣ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
  • ಬೆಂಗಳೂರು ನಗರ

Load Shedding in Karnataka | ಲೋಡ್ ಶೆಡ್ಡಿಂಗ್ ಬಗ್ಗೆ ಟೀಕೆ ಮಾಡುವ ಬಿಜೆಪಿ, ತನ್ನ ಅವಧಿಯಲ್ಲಿ ಎಷ್ಟು ಪ್ರಮಾಣ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

Vighnesh Pawar October 12, 2023 2:45 PM 1 minute read
Load Shedding in Karnataka | Criticizing load shedding, how much power did BJP increase during its tenure?: DCM DK Shivakumar questions

Load Shedding in Karnataka | Criticizing load shedding, how much power did BJP increase during its tenure?: DCM DK Shivakumar questions

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

“ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಈ ವಿಚಾರವಾಗಿ ಟೀಕೆ ಮಾಡುವ ಬಿಜೆಪಿ ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಎಷ್ಟು ಪ್ರಮಾಣ ಹೆಚ್ಚಳ ಮಾಡಿದ್ದರು ಎಂಬುದನ್ನು ಹೇಳಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದರು.

“ಮಳೆ ಬಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ, ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾವು ಆಗ 10 ರಿಂದ 13 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದ್ದೆವು. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ಪರಿಸ್ಥಿತಿ ಬಂದಿದೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ. ಬರಗಾಲ ಎದುರಾದಾಗ ವಿದ್ಯುತ್ ಉತ್ಪಾದನೆ ಕುಸಿಯುತ್ತದೆ. ಅಲ್ಲದೇ ಪ್ರತಿವರ್ಷ ಶೇ 10 ರಿಂದ 15 ರಷ್ಟು ಬೇಡಿಕೆ ಹೆಚ್ಚಾಗುವುದು ವಾಡಿಕೆ. ನಮ್ಮ ಸರ್ಕಾರ ಇನ್ನು 10 ಸಾವಿರ ಎಕರೆಯಲ್ಲಿ ಸೋಲಾರ್ ವಿದ್ಯುತ್ ಹಾಗೂ ವಿಂಡ್ ಪವರ್ ಉತ್ಪಾದನೆಗೆ ಕಾರ್ಯಕ್ರಮ ರೂಪಿಸುತ್ತಿದೆ” ಎಂದು ತಿಳಿಸಿದರು.

“ರೈತರಿಂದಲೂ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ನಮ್ಮ ಸಚಿವರು ಕಾರ್ಯಪ್ರವೃತ್ತರಾಗಿದ್ದು, ಸಮಸ್ಯೆ ಬಗೆಹರಿಸುತ್ತೇವೆ. ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಕೇಂದ್ರ ವಿದ್ಯುತ್ ಸಚಿವರ ಬಳಿ ಚರ್ಚೆ ಮಾಡಿ ಕೇಂದ್ರಿಯ ಗ್ರಿಡ್‌ಗಳಿಂದ ವಿದ್ಯುತ್ ಪೂರೈಕೆಗೆ ಮನವಿ ಮಾಡಿದ್ದಾರೆ” ಎಂದರು.

ಕಾವೇರಿ ವಿಚಾರವಾಗಿ ಮೇಲ್ಮನವಿ ಸಲ್ಲಿಸುತ್ತೇವೆ

ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಮತ್ತೊಮ್ಮೆ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ಮೇಲ್ಮನವಿ ಸಲ್ಲಿಸುತ್ತೇವೆ. ಬೆಂಗಳೂರಿನ ಸುತ್ತಮುತ್ತ ಮಳೆ ಸುರಿದಿರುವ ಪರಿಣಾಮ ಬಿಳಿಗುಂಡ್ಲುವಿಗೆ ಹರಿಯುವ ನೀರಿನ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಸರಿದೂಗಿದೆ. ಮಳೆ ಸುರಿದಿದ್ದು ಎರಡು ಮೂರು ದಿನ ಮಾತ್ರ. 200 ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಸಂಕಷ್ಟದಲ್ಲಿ ಇದ್ದೇವೆ” ಎಂದು ಹೇಳಿದರು.

ಮಹಾರಾಷ್ಟ್ರ ಮತ್ತೆ ಗಡಿ ವಿಚಾರದಲ್ಲಿ ಖ್ಯಾತೆ ತೆಗೆದಿರುವ ವಿಚಾರವಾಗಿ ಕೇಳಿದಾಗ, “ನಮ್ಮ ರಾಜ್ಯದಲ್ಲಿ ನಾವು ಮಾಡುತ್ತೇವೆ, ಅವರ ರಾಜ್ಯದಲ್ಲಿ ಅವರು ಮಾಡಲಿ. ಸುಮ್ಮನೆ ಅಶಾಂತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.

About the Author

Vighnesh Pawar

Subscriber

View All Posts

Post navigation

Previous: ಕಂಬಳಕ್ಕೆ (Kambala) ಸರ್ಕಾರದಿಂದ 1 ಕೋಟಿ ಸಹಾಯಧನ: ಡಿಸಿಎಂ ಡಿ.ಕೆ.ಶಿವಕುಮಾರ್
Next: Karnataka DCM DK Shivakumar | ಕಾಂಗ್ರೆಸ್ ಸೇರಲು ಕಾಯುತ್ತಿರುವ ಅನ್ಯಪಕ್ಷಗಳ 42 ಮುಖಂಡರ ಅರ್ಜಿ ನನ್ನ ಬಳಿ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

November 12, 2026 7:13 PM
ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

November 12, 2026 7:10 PM
ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

November 12, 2026 7:07 PM
ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

November 12, 2026 7:04 PM
ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ ಓಕಳಿಪುರಂ ಎಂಟು ಪಥದ ಕಾರಿಡಾರ್ ಬಳಿ ರಾತ್ರಿ ಡಾಂಬರೀಕರಣ ಕಾಮಗಾರಿಯಲ್ಲಿ ರಸ್ತೆ ರೋಲರ್
  • ಬೆಂಗಳೂರು

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ

November 12, 2026 3:58 PM
ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

November 12, 2026 3:50 PM

ನೀವು ತಪ್ಪಿಸಿಕೊಂಡಿರಬಹುದು

parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

The Bengaluru Live November 12, 2026 7:13 PM
cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

The Bengaluru Live November 12, 2026 7:10 PM
tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

The Bengaluru Live November 12, 2026 7:07 PM
bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

The Bengaluru Live November 12, 2026 7:04 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ
  • ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್
  • ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ
  • ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ
©Copyright 2025 The Bengaluru Live All rights reserved. | MoreNews by AF themes.