Home ಬೆಂಗಳೂರು ನಗರ ಕೆ.ಸಿ.ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ

ಕೆ.ಸಿ.ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ

15
0
TheBengaluruLive - Kannada

ಬೆಂಗಳೂರು: ಕೆ.ಸಿ.ಜನರಲ್ ಆಸ್ಪತ್ರೆಗೆ ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ನ್ಯಾ.ಪಣೀಂದ್ರ, ಸೇರಿ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆ ಬಗ್ಗೆ ಸಾರ್ವಜನಿಕರ ದೂರುಗಳು ಬಂದಿತ್ತು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸ್ವಚ್ಛತೆ, ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯ, ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದರು. ಖುದ್ದು ರೋಗಿಗಳ ಬಳಿಯೇ ಸಮಸ್ಯೆ ಆಲಿಸಿದರು. ಮೂರು ತಂಡಗಳಾಗಿ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದರು.

ಹೆರಿಗೆ ವಾರ್ಡ್‌ನಲ್ಲಿ ಪ್ರತಿಯೊಬ್ಬರು ಹಣ ಕೇಳ್ತಾರೆ. ನಾವು ಹೇಗೆ ಹಣ ನೀಡೋದು. ಕಳೆದ ತಿಂಗಳು ಹೆರಿಗೆ ವಾರ್ಡ್ನಲ್ಲಿ ಸಂಬಂಧಿಕರನ್ನ ಸೇರಿದ್ದ ಮಹಿಳೆಯು ಲೋಕಾಯುಕ್ತ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಎಷ್ಟು ಹಣ ನೀಡಿದ್ರಿ, ಅಂತಾ ಕೇಳಿದ್ರೇ, ‘ಅದನ್ನ ಹೇಳಲ್ಲ. ಪ್ರತಿಯೊಬ್ಬರು ಹಣ ಪಡೆದಿದ್ದಾರೆ’ ಎಂದು ಮಹಿಳೆ ದೂರಿದರು.

LEAVE A REPLY

Please enter your comment!
Please enter your name here