Home ಸಿನಿಮಾ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿರಾದಾರ್ ಸಖತ್ ಸ್ಟೆಪ್ಸ್

ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿರಾದಾರ್ ಸಖತ್ ಸ್ಟೆಪ್ಸ್

87
0
Advertisement
bengaluru

ಬೆಂಗಳೂರು:

ಹಾಸ್ಯ ನಟ ವೈಜನಾಥ್ ಬಿರಾದಾರ ನಟನೆಯ ಐನೂರನೇ ಚಿತ್ರ “ನೈಂಟಿ ಹೊಡಿ ಮನೀಗ್ ನಡಿ” ಚಿತ್ರದ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

ಬಿಡದಿ ಸಮೀಪದ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಿಸಿ ಚಿತ್ರೀಕರಿಸಲಾದ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಎಂಬ ಪಕ್ಕಾ ನಾಟೀ ಸ್ಟೈಲ್ ಹಾಡಿಗೆ ಚಿತ್ರದ ಜೊತೆಗಾತಿ ನಟಿ ನೀತಾ ಜೊತೆ ಎಪ್ಪತ್ತರ ವಯಸ್ಸಿನ ಬಿರಾದಾರ್ ಇಪ್ಪತ್ತರ ಹುಡುಗರೂ ನಾಚುವಂತೆ ಸ್ಟೆಪ್ ಹಾಕಿದ್ದು, ನಿರೀಕ್ಷೆಗೂ ಮೀರಿ ಮೂಡಿಬಂದ ಹಾಡು ಕಂಡು ಇಡೀ ಚಿತ್ರತಂಡ ಫುಲ್ ಖುಷ್ ಗೊಂಡಿದೆ.

ಅಂದಹಾಗೆ ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ ತಯಾರಾಗುತ್ತಿರುವ ರತ್ನಮಾಲಾ ಬಾದರದಿನ್ನಿ ನಿರ್ಮಾಣದ ಈ ಚಿತ್ರಕ್ಕೆ ಡಬಲ್ ನಿರ್ದೇಶಕರಿದ್ದು, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಫಿಲಂ ಸಿಟಿಯಲ್ಲಿ ಇತ್ತೀಚೆಗೆ ಚಿತ್ರೀಕರಣಗೊಂಡ ‘ಸಿಂಗಲ್ ಕಣ್ಣಿ’ನ ಹಾಡಿಗೆ ಚುಟು-ಚುಟು ಖ್ಯಾತಿಯ ಸಾಹಿತಿ ಶಿವು ಭೇರಗಿ ಸಾಹಿತ್ಯ ಬರೆದು ರಾಗ ಸಂಯೋಜಿಸಿದ್ದಾರೆ‌. ಇನ್ನು ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾಂವಿ ಹಿನ್ನೆಲೆಯಲ್ಲಿ ಧ್ವನಿಯಾಗಿದ್ದು, ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ.

bengaluru bengaluru

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಿರಾದಾರ್ ಜೊತೆಯಾಗಿ ಹಿರಿಯ ನಟ ಕರಿಸುಬ್ಬು, ಮಾಣಿಕ್ಯ, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ನೀತಾ, ಪ್ರೀತು ಪೂಜಾ, ಆರ್.ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.

ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಜಾ ರಮೇಶ್ ಸಾಹಸದ ಕುಸುರಿ ಮಾಡಿದ್ದಾರೆ.

ಇನ್ನು ಚಿತ್ರದ ವಿಶೇಷ ಸಂದರ್ಭದಲ್ಲಿ ತೆರೆ ಏರುವ ಉತ್ತರ ಕರ್ನಾಟಕ ಭಾಷಾ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ‌‌.. ಡಬ್ಬಲ್ ಹಾರ್ನಾ ಬಾರಸ್ತಿ‌‌..” ಎಂಬ ಕಚಗುಳಿ ಇಡುವ ಸಾಹಿತ್ಯವಿರುವ ಗೀತೆಗೆ ಚುಟು-ಚುಟು ಖ್ಯಾತಿಯ ಭೂಷಣ್ ಅಷ್ಟೇ ವಿಶೇಷವಾಗಿ ದೃಶ್ಯ ರೂಪ ಕಟ್ಟಿ ಕೊಟ್ಟಿದ್ದಾರೆ, ಒಟ್ಟಿನಲ್ಲಿ ಚಿತ್ರಕ್ಕೆ ಪೂರಕವಾಗಿ ಕಣ್ಮನ ರಂಜಿಸುವ ಈ ಹಾಡು ಜನ ಮನ ಗೆಲ್ಲಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ಚಿತ್ರೀಕರಣಕ್ಕೆ ಡಿಸೆಂಬರ್ ಹೊತ್ತಲ್ಲಿ ಕುಂಬಳಕಾಯಿ ಕಾಣಿಸುವ ಯೋಚನೆಯನ್ನು ಚಿತ್ರತಂಡ ಹೊಂದಿದೆ.


bengaluru

LEAVE A REPLY

Please enter your comment!
Please enter your name here