Home ಬೆಂಗಳೂರು ನಗರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ಟ್ವೀಟ್ ವಿಸ್ತರಣಾವಾದಿ ವರ್ತನೆ : ಎಚ್.ಡಿ. ಕುಮಾರಸ್ವಾಮಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ಟ್ವೀಟ್ ವಿಸ್ತರಣಾವಾದಿ ವರ್ತನೆ : ಎಚ್.ಡಿ. ಕುಮಾರಸ್ವಾಮಿ

12
0
Advertisement
bengaluru

ಬೆಂಗಳೂರು:

ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದಿರು ವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ.ಒಕ್ಕೂಟ ವ್ಯವಸ್ಥೆ ಒಪ್ಪಿ,ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು,ಅದಕ್ಕೆ ಬದ್ಧವಾಗಿ ನಡೆ ಯುತ್ತಿರುವಾಗ ಇಂಥ ವಿಸ್ತರಣಾ ವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಷ ವ್ಯಕ್ತಪಡಿ ಸಿದ್ದಾರೆ.

ಮಹರಾಷ್ಟ್ರ ಮುಖ್ಯಮಂತ್ರಿ ಟ್ವೀಟ್ ಗೆ ತಿರುಗೇಟು ನೀಡಿರುವ ಅವರು,ಬಹುತೇಕ ಕನ್ನಡಿಗ ರಾಜರು ಮಹಾರಾ ಷ್ಟ್ರದ ಬಹುಪಾಲನನ್ನು ಆಗಲೇ ಆಳಿದ್ದಾರೆ.ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.ಉದ್ಧ ವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ,ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ.ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇ ಕೆಂಬುದೂ ತಿಳಿಯುತ್ತದೆ ಎಂದು ಆ ಕ್ರೋಶ ವ್ಯಕ್ತಪಡಿಸಿದ್ದಾರೆ. UNI


bengaluru

LEAVE A REPLY

Please enter your comment!
Please enter your name here